Home ಟಾಪ್ ಸುದ್ದಿಗಳು ಹೈದರಾಬಾದ್‌: ನಕಲಿ ಅಂಕಪಟ್ಟಿ ಮಾರಾಟ| ನಾಲ್ವರ ಬಂಧನ

ಹೈದರಾಬಾದ್‌: ನಕಲಿ ಅಂಕಪಟ್ಟಿ ಮಾರಾಟ| ನಾಲ್ವರ ಬಂಧನ

ಹೈದರಾಬಾದ್: ನಕಲಿ ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.  

ಆರೋಪಿಗಳು ದೇಶದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶೈಕ್ಷಣಿಕ ಸಂಸ್ಥೆಗಳ ಹೆಸರಿನಲ್ಲಿ ಮುದ್ರಿಸಲಾಗಿರುವ ನಕಲಿ ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಬಂಧಿತರನ್ನು ಮೊಹ್ಮದ್ ಇಂತೆಶಾಮ್ ಉದ್ದೀನ್‌ ಹುಸೇನ್‌ (47), ಮೊಹ್ಮದ್ ಅಬ್ದುಲ್ ಖಾದರ್‌ (42), ಮೊಹ್ಮದ್ ಅಲ್ತಾಫ್ ಅಹ್ಮದ್ (43) ಹಾಗೂ ಮೊಹ್ಮದ್ ಇಮ್ರಾನ್‌ (41) ಎಂದು ಗುರುತಿಸಲಾಗಿದೆ.  ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬಂಧಿತರಿಂದ ವಿವಿಧ ವಿ.ವಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಹೆಸರಿನಲ್ಲಿ ಮುದ್ರಿಸಲಾಗಿರುವ ನಕಲಿ ಪ್ರಮಾಣಪತ್ರಗಳು, ನಾಲ್ಕು ಮೊಬೈಲ್‌ ಫೋನ್‌ಗಳು, ಒಂದು ಸಿಪಿಯು, ಕಲರ್‌ ಪ್ರಿಂಟರ್ ಹಾಗೂ ₹ 22 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ವಲಯದ ಡಿಸಿಪಿ ರಾಜೇಶ್‌ ಚಂದ್ರ ಗುರುವಾರ ತಿಳಿಸಿದ್ದಾರೆ.

ವಿದೇಶಗಳಲ್ಲಿ ಉನ್ನತ ವ್ಯಾಸಂಗ ಕೈಗೊಳ್ಳುವ ಆಕಾಂಕ್ಷಿಗಳಿಗೆ ಈ ಆರೋಪಿಗಳು ಭಾರಿ ಮೊತ್ತಕ್ಕೆ ನಕಲಿ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದರು.

Join Whatsapp
Exit mobile version