Home ಕರಾವಳಿ ಬಂಟ್ವಾಳದಲ್ಲಿ ಹಲ್ಲೆ ನಡೆದದ್ದು ಮುಸ್ಲಿಮನ ಮೇಲಲ್ಲ, ಅಮಾಯಕನ ಮೇಲೆ: ಮುಸ್ಲಿಂ ಜಸ್ಟೀಸ್ ಫಾರಂ

ಬಂಟ್ವಾಳದಲ್ಲಿ ಹಲ್ಲೆ ನಡೆದದ್ದು ಮುಸ್ಲಿಮನ ಮೇಲಲ್ಲ, ಅಮಾಯಕನ ಮೇಲೆ: ಮುಸ್ಲಿಂ ಜಸ್ಟೀಸ್ ಫಾರಂ

ಮಂಗಳೂರು: ಬಂಟ್ವಾಳದಲ್ಲಿ ಹಲ್ಲೆ ನಡೆದದ್ದು ಮುಸ್ಲಿಮನ ಮೇಲಲ್ಲ, ಅಮಾಯಕನ ಮೇಲೆ. ಇದು ಖಂಡನೀಯ ಮತ್ತು ಇಂತಹ ಅನೈತಿಕ ಪೊಲೀಸ್ ಗಿರಿ ವಿರುದ್ಧ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಜಸ್ಟೀಸ್ ಫಾರಂ ಆಗ್ರಹಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಸ್ಲಿಂ ಜಸ್ಟೀಸ್ ಫಾರಂ ಸ್ಥಾಪಕಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ , ಸುಸಂಸ್ಕೃ ಜಿಲ್ಲೆ ಎಂದು ಹೆಸರುವಾಸಿಯಾದ ದ.ಕ. ಜಿಲ್ಲೆ ಈಗ ಗೂಂಡಾಗಿರಿಗೆ ಮಾತ್ರ ಸುದ್ದಿಯಾಗುತ್ತಿದೆ. ಚುನಾವಣಾ ವರ್ಷದಲ್ಲಿ ನಮ್ಮ ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳಿಂದ ಇಂತಹ ಘಟನೆ ನಡೆಯುವುದು ಸಹಜವಾಗಿಬಿಟ್ಟಿದೆ. ಯಾಕೆ ಈ ಜಿಲ್ಲೆಯಲ್ಲಿ ಮಾತ್ರ ಅಧಿಕವಾಗಿ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ, ಇದರ ಹಿಂದಿರುವ ಕೈಗಳು ಯಾರದ್ದು ?ಎಂದು ನಾನು ಸ್ಥಳೀಯ ಶಾಸಕರ ಬಳಿ ಕೇಳ ಬಯಸುತ್ತೇನೆ ಎಂದು ಹೇಳಿದರು.

ನಿನ್ನೆ ಬಂಟ್ವಾಳದಲ್ಲಿ ನಡೆದ ಪ್ರಕರಣದಲ್ಲಿ ಕೂಲಿ ಕಾರ್ಮಿಕರಾಗಿರುವಂತಹ  ಇಸಾಖ್ ಅವರ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ ಅವರನ್ನೇ ಅಪರಾಧಿ ಮಾಡುವಂತಹ ಹುನ್ನಾರ ನಡೆಸಿದ್ದಾರೆ. ಇದು ಮೊದಲನೇಲ್ಲ. ಕಾಣಿಯೂರು ಪ್ರಕರಣದಲ್ಲೂ ಇದೇ ರೀತಿ ಸಂಭವಿಸಿದೆ. ಇಂತಹ ಎಲ್ಲಾ ಅಮಾನವೀಯ ಘಟನೆಗಳನ್ನು ಮುಸ್ಲಿಂ ಜಸ್ಟೀಸ್ ಫಾರಂ ತೀವ್ರವಾಗಿ ಖಂಡಿಸುತ್ತದೆ ಎಂದು ರಫೀಉದ್ದೀನ್ ಹೇಳಿದರು.

ಬಂಟ್ವಾಳದಲ್ಲಿ ನಡೆದ ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಬೇಕು ಮತ್ತು ಪತ್ರಿಕಾಗೋಷ್ಠಿ ನಡೆಸಿ ಅದರ ವಿವರಣೆ ನೀಡಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಇದು ನಡೆಯದಿದ್ದಲ್ಲಿ ಜಿಲ್ಲಾದ್ಯಂತ ಮುಸ್ಲಿಂ ಜಸ್ಟೀಸ್ ಫಾರಂ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

ಈ ವೇಳೆ ಮುಸ್ಲಿಂ ಜಸ್ಟೀಸ್ ಫಾರಂ ಉಪಾಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ, ಕಾರ್ಯಕಾರಿಣಿ ಸದಸ್ಯ ಆರಿಫ್ ಬಂದರ್ ಉಪಸ್ಥಿತರಿದ್ದರು.

Join Whatsapp
Exit mobile version