Home ರಾಜ್ಯ ಬಿಎಸ್‌ವೈ ಬಗ್ಗೆ ಮಾತಾಡಿದ್ರೆ ಹುಶಾರ್: ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡ

ಬಿಎಸ್‌ವೈ ಬಗ್ಗೆ ಮಾತಾಡಿದ್ರೆ ಹುಶಾರ್: ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡ

ದಾವಣಗೆರೆ: ಮಾಜಿ ಸಚಿವ ವಿ ಸೋಮಣ್ಣ ದೆಹಲಿಗೆ ತೆರಳಲಿರುವ ವಿಚಾರವಾಗಿ ಮಾಧ್ಯಮದವರು ರೇಣುಖಾಚಾರ್ಯ‌ರನ್ನು ಕೇಳಿದ್ದಾರೆ. ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಸೋಮಣ್ಣ ಎಲ್ಲಿಗೆ ಬೇಕಾದರೂ ಹೋಗಲಿ. ಅದರೆ ಬಿಎಸ್‌ ಯಡಿಯೂರಪ್ಪ ಬಗ್ಗೆ ಮಾತನಾಡಿದ್ರೆ ನಾನು ಸುಮ್ನಿರಲ್ಲ. ಬಿಎಸ್ ವೈ ಕರೆದು ಹೊಡೆದರೂ ಚಿಂತೆಯಿಲ್ಲ. ನಾನು ಹೀಗೆ ಮಾತಾಡುತ್ತೇನೆ ಎಂದು ಮಾಜಿ ಸಚಿವ ರೇಣುಕಾರ್ಯ ಹೇಳಿದ್ದಾರೆ.

ದೆಹಲಿಗೆ ಹೋಗ್ತಾರಾ ಹೋಗಲಿ. ಅದೇನು ಚಾಡಿ ಹೇಳ್ತಾರೋ ಹೇಳಲಿ. ನಮಗೂ ದೆಹಲಿ ನಾಯಕರು ಗೊತ್ತು. ನಾವು ದೆಹಲಿಗೆ ಹೊಗ್ತೀವಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಸೋಮಣ್ಣ ಸಿದ್ದಗಂಗಾಮಠಕ್ಕೆ ಹೋಗಿದ್ದ ಸಂದರ್ಭ ಬಿಎಸ್‌ವೈ ಬಗ್ಗೆ ಮಾತಾಡುವ ಅವಶ್ಯಕತೆ ಏನಿತ್ತು? ವಿ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ. ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ. ವಿಧಾನ ಸಭೆ ಚುನಾವಣೆಯ ಸೋಲನ್ನು ವರಿಷ್ಠರು ನೋಡಿದ್ದಾರೆ. ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ಬಿಎಸ್ ವೈ. ಬಿಎಸ್ ವೈ ರೆಡಿ ಮೇಡ್ ಫುಡ್ ಅಲ್ಲ. ಸೋಮಣ್ಣ ಬಂದಿದ್ದು ಕಾಂಗ್ರೆಸ್‌ನಿಂದ. ಅವರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಅವರು ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಸೋತರು ಸಹ ಎಂಎಲ್ ಸಿ ಆಗಿ ಅಧಿಕಾರ ಅನುಭವಿಸಿದ್ದಾರೆ ಎಂದು ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ.

ಬಿಎಸ್‌ವೈ ನಿಮ್ಮನ್ನು ಸಚಿವರನ್ನಾಗಿ ಮಾಡಿದ್ದೇ ತಪ್ಪಾ? ನೀವು ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ? ಆಗ ನಮಗೇನು ಸಾಮಾರ್ಥ್ಯ ಇರಲಿಲ್ಲವೆ? ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಬಿಎಸ್‌ವೈ ವಿರುದ್ಧ ಮಾತಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.

ಬಿಎಸ್‌ವೈ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತೀರಾ? ನಮಗೂ ಬರುತ್ತೆ. ವಿಜಯೇಂದ್ರಗೆ ಪಟ್ಟ ಕಟ್ಟಿರೋದು ಸುಮ್ಮನೆ ಅಲ್ಲ. ಅವರು ಸಹ ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

Join Whatsapp
Exit mobile version