ಬೆಲಾರಸ್ ಇಲ್ಲವೇ ಬೈಲೋರಶಿಯಾದ ಮಾನವ ಹಕ್ಕುಗಳ ಹೋರಾಟಗಾರ ಆಲೆಸ್ ಬ್ಯಾಲ್ಯಾತ್ಸ್ಕಿ ಅವರಿಗೆ ಹಾಗೂ ರಷ್ಯಾದ ಮಾನವ ಹಕ್ಕುಗಳ ಸಂಸ್ಥೆಯ ಸ್ಮಾರಕ ಮತ್ತು ಉಕ್ರೇನಿನ ಮಾನವ ಹಕ್ಕುಗಳ ಒಕ್ಕೂಟ ಕೇಂದ್ರಕ್ಕೆ 2022ರ ಶಾಂತಿ ನೋಬೆಲ್ ಪ್ರಶಸ್ತಿ ಘೋಷಣೆಯಾಗಿದೆ.
ವ್ಯಕ್ತಿ ಹಾಗೂ ಎರಡು ಸಂಸ್ಥೆಗಳು ಕೆಲವು ದಶಕಗಳಿಂದ ಆಳುವ ಸರಕಾರಗಳನ್ನು ಎದುರು ಹಾಕಿಕೊಂಡು ಜನ ಸಾಮಾನ್ಯ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು ಮತ್ತು ಹೋರಾಡುತ್ತಿದ್ದವು ಎಂದು ನಾರ್ವೆಯ ನೋಬೆಲ್ ಸಮಿತಿ ಹೇಳಿದೆ.
“ಯುದ್ಧಾಪರಾಧಗಳನ್ನು ಸಾಕ್ಷ್ಯ ಚಿತ್ರಗಳಾಗಿ ದಾಖಲಿಸಲು ಅವರು ಪಾಡು ಪಟ್ಟಿದ್ದಾರೆ. ಆಳುವವರ ಮಾನವ ಹಕ್ಕು ದಮನದ ವಿರುದ್ಧ ನಿಂತಿದ್ದಾರೆ. ಒಟ್ಟಾರೆ ಅವರು ಈ ನಾಗರಿಕ ಸಮಾಜದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮ ಪಟ್ಟಿದ್ದಾರೆ” ಎಂದು ಸಹ ನೋಬೆಲ್ ಪ್ರಶಸ್ತಿ ಸಮಿತಿ ಹೇಳಿದೆ.