Home ಟಾಪ್ ಸುದ್ದಿಗಳು ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ಭಾರೀ ವಂಚನೆ | ಐವರ ಬಂಧನ

ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ಭಾರೀ ವಂಚನೆ | ಐವರ ಬಂಧನ

ಲಖ್ನೋ : ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ಅಕ್ರಮವಾಗಿ ವೆಬ್ ಸೈಟ್ ತಯಾರಿಸಿ, ದೇವಾಲಯ ನಿರ್ಮಾಣದ ಹೆಸರಿನಲ್ಲಿ ಲಕ್ಷಾಂತರ ಹಣ ವಂಚಿಸಿದ ಐವರನ್ನು ನೊಯ್ಡಾ ಸೈಬರ್ ಪೊಲೀಸ್ ಠಾಣೆ ಮತ್ತು ಲಖ್ನೋ ಸೈಬರ್ ಅಪರಾಧ ಕೇಂದ್ರದ ಜಂಟಿ ತಂಡ ಬಂಧಿಸಿದೆ.

ಬಂಧಿತರನ್ನು ಆಶಿಸ್ ಗುಪ್ತಾ(21), ನವೀನ್ ಕುಮಾರ್ ಸಿಂಗ್(26), ಸುಮಿತ್ ಕುಮಾರ್(22), ಅಮಿತ್ ಜಾ(24) ಮತ್ತು ಸೂರಜ್ ಗುಪ್ತಾ(22) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ರಾಮ ಜನ್ಮ ಭೂಮಿ ಟ್ರಸ್ಟ್ ಹೆಸರಿನಲ್ಲಿ ವೆಬ್ ಸೈಟ್ ತಯಾರಿಸಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.   

ಬಂಧಿತರಿಂದ ಐದು ಮೊಬೈಲ್ ಫೋನ್, ಲ್ಯಾಪ್ ಟಾಪ್ ಮತ್ತು ಆಧಾರ್ ಕಾರ್ಡುಗಳ 50 ಪ್ರತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Join Whatsapp
Exit mobile version