Home ಟಾಪ್ ಸುದ್ದಿಗಳು ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ : ಮನೆ ಮಾಲೀಕ ಧನರಾಜ್ ವಿರುದ್ಧ FIR

ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ : ಮನೆ ಮಾಲೀಕ ಧನರಾಜ್ ವಿರುದ್ಧ FIR

ರಾಮನಗರ: ಮನೆ ಮಾಲೀಕನೊಬ್ಬ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಪ್ರಸಂಗವೊಂದು ರಾಮನಗರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ಸಂತ್ರಸ್ತ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಮಹಿಳೆ ಸ್ನಾನ ಮಾಡತ್ತಿರುವಾಗ ಕಾಮುಕ ಮಾಲೀಕ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಅಲ್ಲದೆ ವೀಡಿಯೋವನ್ನು ವಾಟ್ಸಪ್ ಗ್ರೂಪ್‍ಗಳಲ್ಲಿ ಶೇರ್ ಮಾಡಿದ್ದಾನೆ.

ಇತ್ತ ಸಾಮಜಿಕ ಜಾಲತಾಣದಲ್ಲಿ ಶೇರ್ ಆದ ವಿಡಿಯೋ ನೋಡಿ ಮಹಿಳೆ ಬೆಚ್ಚಿಬಿದ್ದಿದ್ದು, ಕಾಮುಕ ಧನರಾಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕನಕಪುರ ಪೊಲೀಸರು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version