Home ಟಾಪ್ ಸುದ್ದಿಗಳು ಹೋಟೆಲ್ ಧ್ವಂಸ: ನಟ ವೆಂಕಟೇಶ್, ರಾಣಾ ಸೇರಿ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಕೇಸ್

ಹೋಟೆಲ್ ಧ್ವಂಸ: ನಟ ವೆಂಕಟೇಶ್, ರಾಣಾ ಸೇರಿ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಕೇಸ್

ಹೈದರಾಬಾದ್: ಗುತ್ತಿಗೆಗೆ ನೀಡಿದ್ದ ಹೋಟೆಲ್ ಅನ್ನು ಅವಧಿಗೂ ಮುನ್ನವೇ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರು ತೆಲುಗು ನಟರಾದ ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ, ನಿರ್ಮಾಪಕ ಡಿ.ಸುರೇಶ್ ಸೇರಿದಂತೆ ಅವರ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ನ್ಯಾಯಾಲಯದ ನಿರ್ದೇಶನದಂತೆ ನಟರು ಸೇರಿದಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪಿತೂರಿ, ಅತಿಕ್ರಮಣ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ ಗಳಡಿ ಜನವರಿ 11ರಂದು ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಿಸಲಾಗಿದೆ.

2014ರಲ್ಲಿ ದಗ್ಗುಬಾಟಿ ಕುಟುಂಬವು ಫಿಲ್ಮ್‌ ನಗರದ ಫ್ಲ್ಯಾಟ್‌ ನಲ್ಲಿ ಭೂಮಿಯನ್ನು ಗುತ್ತಿಗೆಗೆ ನೀಡಿತ್ತು. ನೋಂದಾಯಿತ ಗುತ್ತಿಗೆ ಪತ್ರ ನೀಡಿದ ನಂತರ ಅಲ್ಲಿ ಹೋಟೆಲ್ ತೆರೆಯಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.

ಗುತ್ತಿಗೆ ಪತ್ರದ ಅವಧಿ ಚಾಲ್ತಿಯಲ್ಲಿದ್ದರು ಕೂಡಾ ವೆಂಕಟೇಶ್ ಸೇರಿದಂತೆ ದಗ್ಗುಬಾಟಿ ಕುಟುಂಬಸ್ಥರು ಹೋಟೆಲ್ ತೆರವುಗೊಳಿಸಲು ಪ್ರಯತ್ನಿಸಿದ್ದರು. ನಂತರ ಅವರ ವಿರುದ್ಧ ತಡೆಯಾಜ್ಞೆಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದೆವು, ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿದೆ. ಹೀಗಿದ್ದರೂ ದಗ್ಗುಬಾಟಿ ಕುಟುಂಬಸ್ಥರು ಹೋಟೆಲ್ ಅನ್ನು ಕೆಡವಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

Join Whatsapp
Exit mobile version