Home ಟಾಪ್ ಸುದ್ದಿಗಳು ಚರಿತ್ರೆ ಪುಸ್ತಕಗಳು ವಾದದ ಮೇಲೆ ನಿಂತಿವೆಯೇ ಹೊರತು ಸತ್ಯದ ಮೇಲಲ್ಲ: ಅನಿತಾ ಕರ್ವಾಲ್

ಚರಿತ್ರೆ ಪುಸ್ತಕಗಳು ವಾದದ ಮೇಲೆ ನಿಂತಿವೆಯೇ ಹೊರತು ಸತ್ಯದ ಮೇಲಲ್ಲ: ಅನಿತಾ ಕರ್ವಾಲ್

ನವದೆಹಲಿ: ಪಾಠ ಪುಸ್ತಕಗಳು ಸತ್ಯವನ್ನೇ ಹೇಳುತ್ತವೆ ಎಂದೇನೂ ಇಲ್ಲ. ಅದರಲ್ಲೂ ನಮ್ಮ ಇತಿಹಾಸ ಪುಸ್ತಕಗಳು ವಾದವನ್ನು ಆದರಿಸಿವೆ ಹೊರತು ನಿಜವಾದ ಘಟನೆಗಳನ್ನಲ್ಲ ಎಂದು ಸಾಮಾಜಿಕ ಶಿಕ್ಷಣ  ಮತ್ತು ಸಾಕ್ಷರತೆ ಸಂಸ್ಥೆಯ ಕಾರ್ಯದರ್ಶಿ ಅನಿತಾ ಕರ್ವಾಲ್ ಹೇಳಿದ್ದಾರೆ.

ಹಿಂದಿನ ಸಿಬಿಎಸ್ ಇ ಚೇರ್ ವುಮನ್ ಸಹ ಆಗಿದ್ದ ಕರ್ವಾಲ್ ಅವರು ಭಾರತದ ಶಿಕ್ಷಣವು ಮಗುವಿನ ಕೌಶಲ್ಯವನ್ನು ಸತ್ಯದ ಮೇಲೆ ನಿಲ್ಲಿಸುವಂತೆ ಇಲ್ಲ. ಭಾರತವೂ ಭಾಗಿಯಾಗುವ ಪಿಐಎಸ್ಎ- ಅಂತಾರಾಷ್ಟ್ರೀಯ ವಿದ್ಯಾರ್ಥಿ ಮೌಲ್ಯಮಾಪನ ಕಾರ್ಯಕ್ರಮಕ್ಕೆ ಪೂರಕವಾಗಿಲ್ಲ ಎಂದರು.

“ವಿಜ್ಞಾನ ಕಲಿಕೆ ನೋಡಿ, ಇಲ್ಲಿ ತೀವ್ರ ಆಲೋಚನೆಗಳಿಗೆ ಮೊದಲ ಮಣೆ. ವಿಜ್ಞಾನವಿರಲಿ, ಭಾಷಾ ಕಲಿಕೆಯಿರಲಿ ಜನರು ಟೀಕಿಸುವಂತೆ ಇಲ್ಲಿನ ಎನ್ ಸಿಇಆರ್ ಟಿ ಪಠ್ಯ ಕ್ರಮಗಳು ಇವೆ. ಮುಖ್ಯವಾದ ಟೀಕೆ ಎಂದರೆ ವಾದದಷ್ಟು ಸತ್ಯಗಳು ಇಲ್ಲಿಲ್ಲ ಎನ್ನುವುದಾಗಿದೆ. ಇಲ್ಲಿ ಕಲಿಯುವ ಮಗುವೇ ತಾನೇ ಒಂದು ತೀರ್ಮಾನಕ್ಕೆ ಬರಬೇಕಾದ ಸ್ಥಿತಿ ಇದೆ” ಎಂದು ಕರ್ವಾಲ್ ತಿಳಿಸಿದರು. 

ರಾಷ್ಟ್ರೀಯ ಕರಿಕುಲಂ ಚೌಕಟ್ಟಿನ ಸ್ಟೀರಿಂಗ್ ಸಮಿತಿಯು 25 ತಜ್ಞರ ಗುಂಪುಗಳೊಡನೆ ಇದನ್ನು ಸಾಣೆ ಹಿಡಿದು ನೋಡಿತು. ಇದರ ಮೇಲೆ ಮೇ 15ರಂದು ಪಠ್ಯ ಕ್ರಮವನ್ನು ಬದಲಿಸಿ ರೂಪಿಸುವ ಕೆಲಸ ಆರಂಭವಾಗಿದೆ.

ಸಂವಿಧಾನದ ಮೊದಲ ವಿಧಿ ದೇಶದ ಹೆಸರನ್ನು ಹೇಳುತ್ತದೆ. ವಿಷಯವು ವಸ್ತುನಿಷ್ಠವಾಗಿರಬೇಕು. ಆದರೆ ಪಾಠಗಳಲ್ಲಿ ವಿಷಯವಿದೆ; ವಸ್ತುನಿಷ್ಠತೆ ನಷ್ಟವಾಗಿದೆ. ನಾವು ಎಳೆಯ ಮಿದುಳಿಗೆ ಮೊದಲು ಭಾರತವನ್ನು ಕಲಿಸಬೇಕು.ಮಕ್ಕಳಿಗೆ ಸಮಾಜ ವಿಜ್ಞಾನವನ್ನು ಕಲಿಸುವುದು ಸಕಾರಾತ್ಮಕವಾಗಿರುತ್ತದೆ. ಅಲೆಗ್ಸಾಂಡರ್ ಗ್ರೀಕರಿಗೆ ಗ್ರೇಟ್, ಇಲ್ಲಿ ನಮ್ಮ ಗ್ರೇಟ್ ಬರಬೇಕು. ಅದು ಸಹ ಸತ್ಯದ ಮೇಲೆ ನಿಲ್ಲಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Join Whatsapp
Exit mobile version