Home ಟಾಪ್ ಸುದ್ದಿಗಳು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಝಂ ಖಾನ್

ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಝಂ ಖಾನ್

ನವದೆಹಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಮ್ ಪುರ ಕ್ಷೇತ್ರದಿಂದ ಗೆದ್ದಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ ಮಂಗಳವಾರ ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಜ್ಯ ಚುನಾವಣೆಯಲ್ಲಿ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ನಂತರ ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಝಂ ಖಾನ್ ಅವರು ರಾಮ್ ಪುರ ಕ್ಷೇತ್ರದಲ್ಲಿ 55,141 ಮತಗಳ ಅಂತರದಿಂದ ಬಿಜೆಪಿಯ ಆಕಾಶ್ ಸಕ್ಸೇನಾ ಅವರನ್ನು ಸೋಲಿಸಿದ್ದರು. ಅಖಿಲೇಶ್ ಯಾದವ್ 67,504 ಮತಗಳ ಅಂತರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಎಸ್ ಪಿ ಸಿಂಗ್ ಬಘೇಲ್ ಅವರನ್ನು ಸೋಲಿಸುವ ಮೂಲಕ ಕರ್ಹಾಲ್ ಸ್ಥಾನವನ್ನು ಗೆದ್ದಿದ್ದಾರೆ.

Join Whatsapp
Exit mobile version