Home ಅಂಕಣಗಳು ಬಹುಜನರು ಮಾನ್ಯ ಮಾಡದ ಹಿಂದುತ್ವ, ನಾವೇನು ರಕ್ಷಿಸುತ್ತಿದ್ದೇವೆ ?

ಬಹುಜನರು ಮಾನ್ಯ ಮಾಡದ ಹಿಂದುತ್ವ, ನಾವೇನು ರಕ್ಷಿಸುತ್ತಿದ್ದೇವೆ ?

ಆಗಸ್ಟ್ 8ರಂದು ದೆಹಲಿಯಲ್ಲಿ ಒಂದು ಗುಂಪು ರಾಮನ ಪರ ಘೋಷಣೆ ಕೂಗುತ್ತಾ ಇನ್ನೊಂದು ಕಡೆ ಯಾವಾಗ ಮುಸ್ಲಿಮರನ್ನು ಕೊಚ್ಚಲಾಗುತ್ತದೆ ಎಂದೂ ಕೂಗುತ್ತಿತ್ತು. ಕೇಳುಗರು ಮತ್ತು ನೋಡುಗರು ಇದರಿಂದ ಆಘಾತಗೊಂಡರು. ಅವರು ಕೂಗಿದ್ದೆಲ್ಲ 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಸಾಕಾರಗೊಂಡಿತು.


ದೇಶದ ನಾಗರಿಕರನ್ನು ಅದೂ ದೇಶದ ರಾಜಧಾನಿಯಲ್ಲಿ ಕೊಚ್ಚಲು ಹೇಳುವ ಗುಂಪಿನ ಪರಿಣಾಮವೇನು ಊಹಿಸಿ. ಭದ್ರತಾ ಪಡೆಗಳು ಏನಾದರೂ ಮಾಡಿದವೇನು ಎಂದರೆ ಬರೀ ಗುಸುಗುಸು ಮಾತ್ರ ಕಂಡಿತು.
ದೈಹಿಕವಾಗಿ ಒಂದು ವರ್ಗವನ್ನು ಮುಗಿಸಲು ಹೊರಟ ಕೂಗು ದೇಶದ ಭದ್ರತಾ ವೈಫಲ್ಯವಾಗಿದೆ. ಅಂದರೆ ಅಸುರಕ್ಷತೆ ಎಲ್ಲ ಕಡೆ ಹರಡುತ್ತಿದೆ. ಅಸುರಕ್ಷತೆಯ ಹೆಚ್ಚಳ ಸಮಾಜಕ್ಕೆ ಬೆದರಿಕೆಯಾಗಿದೆ. ಭೂಬಿಸಿ, ಕಾರ್ಪೊರೇಶನ್ ಗಳ ಅನಾಚಾರ, ನೈಸರ್ಗಿಕ ವಿಪತ್ತುಗಳು, ದಮನಕಾರಿ ನೀತಿಗಳು, ವೈರಿ ದೇಶಗಳು, ಉಗ್ರ ಸಂಘಟನೆಗಳು ದೇಶದ ಪ್ರಮುಖ ಸಮಸ್ಯೆಗಳಾಗಿವೆ.


ಭದ್ರತಾ ಬೆದರಿಕೆ ಭದ್ರತಾ ವರ್ಗವನ್ನು ಕಾಡುತ್ತಿದೆ. ಆಂತರಿಕ ಉಗ್ರವಾದ ಗುಂಪುಗಳು. ಇಸ್ಲಾಮೀಯ, ಮಾವೋವಾದಿ, ವಿಶಿಷ್ಟ ಸ್ವತಂತ್ರ ವಿಭಜನಾವಾದಿಗಳೂ ಇದ್ದಾರೆ. ಇವು ಸಾಂಸ್ಕೃತಿಕ ಅಲ್ಪಸಂಖ್ಯಾತರು, ಬಾಹ್ಯ ತತ್ವಗಳನ್ನು ಆಧರಿಸಿವೆ.


ಆದರೆ ಬಹುಜನರಲ್ಲಿ ಹಿಂದುತ್ವದ ಉಗ್ರತ್ವವನ್ನು ಗುರುತಿಸುವುದು ಕಡಿಮೆ. ಇದಕ್ಕೆ ಕಾರಣ ಸೂಚ್ಯ ನಂಬಿಕೆಗಳು, ನಿರಾಕರಣೆ, ಶಿಸ್ತೆಂಬ ಸಾಮಾಜಿಕತೆ ಹಾಗೂ ಭಯ.


ಈ ರೀತಿಯ ಮೌನ ಸಮ್ಮತಿಯಿಂದ ಏಳುವ ಪ್ರಶ್ನೆಯೆಂದರೆ ಅಭದ್ರತೆಯು ಸತ್ವಯುತವಾಗುತ್ತ ಸಾಗಿದೆ. ಯಾರ ಭಯ ಬಿತ್ತುತ್ತಿದ್ದಾರೆ? ಯಾರು ಭೀತಿಗೆ ಚೌಕಟ್ಟು ಹಾಕುತ್ತಿದ್ದಾರೆ? ಸಾಮಾಜಿಕ ಭದ್ರತೆಯನ್ನು ದುರ್ಬಲಗೊಳಿಸುವ ಬಲೆ ಯಾರದು? ಅಲ್ಪಸಂಖ್ಯಾತರ ಮೇಲೆ ಒಂದು ಉಗ್ರ ತತ್ವದ ಗುಂಪು ಭಯಾನಕ ಸ್ಥಿತಿಯನ್ನು ಒಡ್ಡಿದೆ ಎಂದರೆ ದೇಶ ಎತ್ತ ಸಾಗಿದೆ? ಈ ಉಗ್ರ ತತ್ವದ ಗುಂಪು ದೇಶದ ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ. ಅವರ ಹಿಂಸೆ ಅವರ ಗುರಿ ಸಾಧನೆಯ ಹೊರತು ಬೇರೇನನ್ನೂ ಗೌರವಿಸುವುದಿಲ್ಲ.
ಹಲವು ಬಹುಸಂಖ್ಯಾ ಸಂಘಟನೆಗಳು ಹೇಗೆ ಭದ್ರತೆಗೆ ಹಾನಿ ಮಾಡುತ್ತಿವೆ ಎನ್ನುವುದು ಅಧ್ಯಯನ ಯೋಗ್ಯವಾಗಿದೆ. ಹಿಂದೂ ತೀವ್ರವಾದಿ ಸಂಘಟನೆಗಳ ಬಗೆಗೆ ಭದ್ರತಾ ಗುಂಪುಗಳು ಮೌನವಾಗಿರುವುದು ಈ ದೇಶಕ್ಕೆ ಅತಿ ದೊಡ್ಡ ಬೆದರಿಕೆ ಎಂಬ ಜ್ಞಾನ ಬಲಿಯುವುದು ಯಾವತ್ತು?
ಇದರಿಂದ ಮೂರು ತೀರ್ಮಾನಕ್ಕೆ ಬರಬಹುದು. ಬಹುಮತೀಯ ತೀವ್ರವಾದಿಗಳು ತಮಗೆ ಮಾತ್ರ ದೇಶದಲ್ಲಿ ಹಕ್ಕು ಎಂಬ ಸ್ಥಿತಿ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಈ ದೇಶ ಹಿಂದೂಗಳಿಗೆ ಮಾತ್ರ ಸೇರಿದ್ದು. ಎರಡು, ಇವರ ಹಿಂಸೆಯು ರಾಷ್ಟ್ರ ಕಟ್ಟುವ ಗುರಿಗಿಂತ ದ್ವೇಷ ಬಿತ್ತುವ ರೀತಿಯಲ್ಲಿ ಮುಂದುವರಿದಿದೆ. ಅದಕ್ಕಾಗಿ ಅವರು ತಮಗನುಕೂಲವಾಗುವಂತೆ ಮೈತ್ರಿ ಮತ್ತು ಹೆಚ್ಚು ಸಂಘಟನೆಗಳನ್ನು ಕಟ್ಟುತ್ತಿರುತ್ತಾರೆ.
ಅಂತಿಮವಾಗಿ ಒಳ ದನಿಗಳನ್ನು ಅದುಮಿಡುವುದು. ಅಂದರೆ ಬಹುಜನರ ಸ್ವರ ಮಾತ್ರ ಕೇಳಬೇಕು. ಶಿಕ್ಷಣ ಮತ್ತಿತರ ತಜ್ಞರು, ಬುದ್ಧಿಜೀವಿಗಳೆನ್ನುವವರು ಈ ಹಿಂದುತ್ವದ ಭಾಗವಾಗಿಲ್ಲ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ಅವರು ಆಡಿದ್ದೇ ಆಟವಾಗಿದೆ. ಅಂದರೆ ಅವರು ಹೇಳುವುದೇ ಸರಿ.


ಅಪಾಯವನ್ನು ಗುರುತಿಸದಿರುವುದು ಸಮುದಾಯಗಳ ಮೌನವು ಇದರ ಅಪಾಯವನ್ನು ತಿಳಿಯದಿರುವುದರಿಂದಲೇ ಒಡಮೂಡಿದೆ. ನಾವು ಪಾಕಿಸ್ತಾನ, ಬಾಂಗ್ಲಾದೇಶದಿಂದಾಗುವ ಅಪಾಯದ ಬಗೆಗೆ ಚರ್ಚಿಸುತ್ತ ಮಗ್ಗುಲಲ್ಲಿನ ಅಪಾಯವನ್ನು ಅರಿಯದಾಗಿದ್ದೇವೆ. ಅಂದರೆ ಚರ್ಚೆಗೆ ಎದುರು ವಿಷಯವನ್ನು ಬಿಸಿ ಬಿಸಿಯಾಗಿ ಇಟ್ಟಾಗ ನಿಜವಾದ ಅಪಾಯ ತಿಳಿಯದೆ ಹೋಗುತ್ತದೆ. ಅಂದರೆ ಹಿಂದುತ್ವ ಉಗ್ರವಾದವು ಮುಸ್ಲಿಂ ಉಗ್ರವಾದಕ್ಕೆ ಪ್ರತಿಯಾಗಿ ಮಾತ್ರ ಬಂದಿದೆ ಎಂದು ಜಾಣತನದಿಂದ ತೂರಿಸಲಾಗಿದೆ. ಪಾಕಿಸ್ತಾನದ ಉಗ್ರವಾದವಾಗಲಿ, ಬಾಂಗ್ಲಾದೇಶದ ಶಿಯಾ ಉಗ್ರ ಬಣಗಳಾಗಲಿ ಎದುರು ಇಟ್ಟಾಗ ಪಕ್ಕದ ಹಿಂದೂ ಉಗ್ರವಾದವನ್ನು ಮರೆಯುವುದೇ ಇವರಿಗಿರುವ ಅನುಕೂಲ.


ಇನ್ನೊಂದು ಸಂಗತಿಯೆಂದರೆ ಇಸ್ಲಾಂ ಉಗ್ರವಾದವು ಹಿಂದೂ ಉಗ್ರವಾದಕ್ಕಿಂತ ತುಂಬ ಹೆಚ್ಚು ಅಪಾಯಕಾರಿ ಎಂದು ಬಿಂಬಿಸುವುದು. ಈ ವಾದವೇ ಮುಖ್ಯವಾಗಿ 2014ರಿಂದ ಬಿಜೆಪಿ ಹೆಚ್ಚು ಬೆಳೆಯುವುದಕ್ಕೆ ಸಹಾಯಕವಾಗಿದೆ. ಇದರ ಸತ್ಯ ಹುಡುಕುವುದರಲ್ಲಿ ಭಾರತಕ್ಕೆ ಆಗಿರುವ ಅಪಾಯವನ್ನು ಅರಿಯುವ ಗೋಜಿಗೆ ನಾವು ಹೋಗುತ್ತಿಲ್ಲ.

2011ರಿಂದ “ಪಾಕಿಸ್ತಾನದ ಉಗ್ರ” ಎಂಬ ಬೆದರುಗೊಂಬೆ ಮುಂದಿಟ್ಟು ಇಲ್ಲಿನ ಉಗ್ರ ಬೆಳವಣಿಗೆಯೊಡನೆ ಪಕ್ಷವನ್ನು ಬೆಳೆಸಲಾಗಿದೆ. ಇದನ್ನು ಕೂಡ ಒಂದು ಅತಿರೇಕದ ಚಿಂತಕ ಗುಂಪು ರೂಪಿಸಿ ಗೆದ್ದಿದೆ. ಅಫ್ಘಾನ್- ಪಾಕ್, ಇಂಡೋ ಪೆಸಿಫಿಕ್ ಎಂಬ ಒಂದು ವಿಭಜನೆ ಕೂಡ ಇದರಿಂದ ಸಾಧ್ಯವಾಗಿದೆ. ಹಿಂದೂ ರಾಷ್ಟ್ರೀಯವಾದ ಎನ್ನುವುದು ಆ ಕಡೆಯ ಗುಮ್ಮನನ್ನು ತೋರಿಸಿ ಬೆಳೆದಿದೆ. ದೇಶೀಯವಾವಿ ಮಾವೋವಾದಿ, ಇಸ್ಲಾಂವಾದಿ ಎಂದು ತೋರಿಸಿ ಹಿಂದೂ ತೀವ್ರವಾದಿಗಳನ್ನು ಬಚ್ಚಿಡುವುದು ಸಾಧ್ಯವಾಗಿದೆ.


ವೈರಿಗಳಲ್ಲಿ ಭಯ ಬೀಳಿಸಲು ಒಗ್ಗಟ್ಟಿನ ಜೈ ಶ್ರೀರಾಂ ಘೋಷಣೆಯ ಅಗತ್ಯವಿದೆ ಎಂದು ಈ ಗುಂಪು ಬಯಸಿದೆ. ಆ ಲೆಕ್ಕಾಚಾರದಲ್ಲಿಯೇ ನಡೆದಿದೆ. ಹೋರಾಟಗಾರರು ಮತ್ತು ಭೀತಿ ಹರಡುವವರು ಎಂದು ತಮ್ಮ ಹಿಂಸೆಯನ್ನು ಸಹ್ಯ, ಅಗತ್ಯ, ಅನಿವಾರ್ಯ ಎನ್ನುತ್ತ ಎದುರು ಹಿಂಸೆಯನ್ನು ಎತ್ತಿ ತೋರಿಸುವುದೇ ಇವರ ಸಿದ್ಧ ಸೂತ್ರ.


ನಾನಾ ಮೂಲದ ಪೋಷಕತ್ವದಲ್ಲಿ ತಮ್ಮ ತತ್ವಗಳನ್ನು ಹರಡಲು ಸಂಘ ಜಾಲವನ್ನು ಇವರು ಹರಡಿದ್ದಾರೆ. ಇಲ್ಲಿ ತಲೆಗಳು ಸೂಚಿಸಿದಂತೆ ಹೊರಗೆ ಉಳಿದವರು ನಾಚಿಕೆಗೆಟ್ಟು ಕಾರ್ಯಾಚರಿಸುತ್ತಾರೆ. ಭಾರತದ ಬಡತನ, ನಿರುದ್ಯೋಗ ಕೆಲವರಿಗೆ ಈ ಸತ್ಯ ಹೊರಗಿಡಲು ಮನಸ್ಸಿದ್ದರೂ ಅವರಲ್ಲಿ ಅದಕ್ಕೆ ಬೇಕಾದ ಧನ ಬಲವಾಗಲೀ ವ್ಯವಸ್ಥೆಯಾಗಲೀ ಇರುವುದಿಲ್ಲ. ಕೆಲಸದಲ್ಲಿ ಅಭದ್ರತೆ, ಕಡಿಮೆ ಸಂಬಳದ ಜಾಲವೂ ದೇಶದಲ್ಲಿದ್ದು, ಇವರೆಲ್ಲರ ಬದುಕೇ ಅವ್ಯವಸ್ಥೆ ಆಗಿರುವುದರಿಂದ ವ್ಯವಸ್ಥಿತ ಹಿಂದುತ್ವ ದಾಳಿಯೆದರು ನಿಲ್ಲುವ ಪರಿಸ್ಥಿತಿಯಲ್ಲಿ ಇರುವುದಿಲ್ಲ.

ಕೆಲವು ತಜ್ಞರು ಇದನ್ನು ವಿಶ್ವವಿದ್ಯಾನಿಲಯದಂಥ ನೆಲೆಗಳಲ್ಲಿ ಕುಳಿತು ಗಮನಿಸಿದರೂ, ಅವರ ವಿಚಾರದಡಿ ಬಹುತ್ವದ ಹಿಂಸೆಯನ್ನು ತೊಡೆಯುವ ಕಾರ್ಯಾಚರಣೆಗೆ ಅವರಲ್ಲಿ ಯಾವ ಪಡೆಯೂ ಇಲ್ಲ. ಅವರು ಮಾಡುವ ಕೆಲಸ ಲೇಖನಗಳ ಮೂಲಕ ಮಾಹಿತಿ ನೀಡುವುದು. ಆದರೆ ಅವರೂ ಆ ಹಿಂದುತ್ವದವರ ಬಳಿಯಲ್ಲೇ ಬದುಕಬೇಕಾದ ಸ್ಥಿತಿಯಿದೆ. ಇದು ಈ ಕಾಲದ ಯುಗ ಧರ್ಮ!
ಫ್ಯಾಮಿಲಿ ಮ್ಯಾನ್ ಧಾರಾವಾಹಿಯಲ್ಲಿ ತನಿಖಾಧಿಕಾರಿಗಳು ತಮ್ಮ ಖಾಸಗಿ ಬದುಕಿನಲ್ಲಿ ಮುಳುಗಿರುವುದರಿಂದ ಕರ್ತವ್ಯ ನಿರ್ವಹಿಸುವಾಗ ನೈತಿಕತೆಯ ಗೊಂದಲವನ್ನು ಎದುರಿಸುತ್ತಾರೆ. ಆದ್ದರಿಂದ ಪಾತ್ರಗಳು ಕರ್ತವ್ಯದಲ್ಲಿ ಹಿಂದೆ ಬೀಳುತ್ತವೆ, ಬೇಗ ಮರೆಯಾಗಿ ಹೋಗುತ್ತವೆ. ಆದರೂ ಅವರು ಸರಿ ಎಂಬುದನ್ನು ಅಲ್ಲಿ ಲೇಖಕರು ಬರೆದು ತೋರಿಸಿದ್ದಾರೆ.


ಒಟ್ಟಾರೆ ಹೊರಗಿನ ಬೆದರಿಕೆ ಪಾಕಿಸ್ತಾನ, ತಮಿಳು, ಕಾಶ್ಮೀರಿ, ಮುಸ್ಲಿಂ, ಚೀನಾ ಸುತ್ತಲೇ ಸುತ್ತಿ ಕಾಲ ಬುಡದ ನಿಜ ತಿಳಿಯದಂತಾಗುತ್ತದೆ. ಇನ್ನೂ ಮುಂದೆ ಹೋಗಿ ಜಿಹಾದ್ ತೊಂದರೆ ಎಂದು ಗಿರಕಿ ಹೊಡೆಯುತ್ತದೆ. ಅದು ಲವ್ ಜಿಹಾದ್ ಆಗುತ್ತದೆ. ಮುಂದಾಳುವಿನ ಮಗಳನ್ನು ಮದುವೆಯಾದ ಮುಸ್ಲಿಂ ತಾನೂ ಹಿಂದೂ ಎಂದು ಪ್ರಕಟಗೊಳ್ಳುತ್ತಾನೆ. ಇನ್ನು ಕಾನೂನು ಪಾಲಕ ಪೊಲೀಸರಲ್ಲೇ ಕೋಮುವಾದಿ ಇದ್ದರೆ ಸಮಾಜದ, ದೇಶದ ಸಂರಚನೆಯ ಮೇಲೆಯೇ ಅದು ದುಷ್ಪರಿಣಾಮ ಬೀರುತ್ತದೆ. ಇರುವ ಚೌಕಟ್ಟು ಮೀರಿ ಇಡುವ ಚೌಕಟ್ಟು ಸಂರಚನೆ ಬೆಳೆಯುತ್ತದೆ.


ಆದರೆ ಒಂದು ಆಶಾಕಿರಣವೆಂದರೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಕಾಲರ್ ಗಳು ಈ ಬಹುಮತೀಯ ಪರಿಸ್ಥಿತಿಯನ್ನು ಪ್ರಶ್ನಿಸುತ್ತಿದ್ದಾರೆ. ಅವರು ಭದ್ರತೆಗಾಗಿ ಜಾತಿ, ಧರ್ಮ, ಜನಾಂಗಗಳನ್ನು ಕೂಡ ಮುಂದಿಡುತ್ತಾರೆ. ಆದರೆ ಈ ಧ್ವನಿಗಳು ಮುಖ್ಯ ಧ್ವನಿಯ ಬೊಬ್ಬೆಯಲ್ಲಿ ಕೊಚ್ಚಿ ಹೋದರೂ ಅಂತಿಮವಾಗಿ ಅವುಗಳಲ್ಲಿ ಒಂದು ಅಂತರ ಬಂಧುತ್ವ ಪಡಿಮೂಡುತ್ತದೆ. ಅಲ್ಪ ಸಂಖ್ಯಾತರ ಧ್ವನಿ ಬಹುಸಂಖ್ಯಾತರಿಗೆ ಕೇಳುವಂತಾಗಬೇಕು.


ಪಂಜಾಬಿ ಕವಿ ಪಾಶ್ ಒಮ್ಮೆ ಹೇಳಿದಂತೆ, ದೇಶದ ಭದ್ರತೆಯು ಟೀಕೆ ಬಯಸದ ಇದ್ದರೆ ಅಂಥ ಭದ್ರತೆಯೇ ಜನರಿಗೆ ಒಂದು ಬೆದರಿಕೆ ಆಗಿರುತ್ತದೆ. ಭಾರತದ ಭದ್ರತೆಯ, ಸುರಕ್ಷತೆಯ ಜವಾಬ್ದಾರಿ ಹೊತ್ತವರು ಕವಿ ಪಾಶ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಒಂದು ಪ್ರಮುಖ ಪ್ರಶ್ನೆ, ಯಾರನ್ನು ನಾವು ರಕ್ಷಿಸಬೇಕು, ಜನರನ್ನೋ, ದೇಶವನ್ನೋ?

Join Whatsapp
Exit mobile version