Home ಕರಾವಳಿ ಕಡಬ | ಗೆಳತಿಯ ಮನೆಗೆ ಈದ್ ಹಬ್ಬಕ್ಕೆ ತೆರಳಿದ ಹಿಂದೂ ಸ್ನೇಹಿತೆಗೆ ಕಿರುಕುಳ ಪ್ರಕರಣ: ಸಂಘಪರಿವಾರದ...

ಕಡಬ | ಗೆಳತಿಯ ಮನೆಗೆ ಈದ್ ಹಬ್ಬಕ್ಕೆ ತೆರಳಿದ ಹಿಂದೂ ಸ್ನೇಹಿತೆಗೆ ಕಿರುಕುಳ ಪ್ರಕರಣ: ಸಂಘಪರಿವಾರದ ನಾಲ್ವರ ವಿರುದ್ಧ FIR

ಉಪ್ಪಿನಂಗಡಿ: ಆತೂರು ಸಮೀಪದ ಕುದ್ಲೂರು ಎಂಬಲ್ಲಿ ಹಿಂದು ಯುವತಿಯೋರ್ವಳು ತನ್ನ ಮುಸ್ಲಿಮ್ ಗೆಳತಿಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಮನೆಗೆ ದಾಳಿ ನಡೆಸಿ ಕೋಲಾಹಲ ಸೃಷ್ಟಿಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಸುದರ್ಶನ್ ಗೋಗಡಿ, ಪ್ರಶಾಂತ್ ಕೆ ಕೋಯಿಲ, ತಮ್ಮು ಕಲ್ಕಾಡಿ, ಪ್ರಸಾದ್ ಕೋಯಿಲ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಸಂಘಪರಿವಾರದ ಕಾರ್ಯಕರ್ತರು ಎಂದು ತಿಳಿದು ಬಂದಿದೆ.

ಹಿಂದು ಯುವತಿಯೋರ್ವಳು ಈದ್ ಹಬ್ಬದಂದು ತನ್ನ ಮುಸ್ಲಿಮ್ ಗೆಳತಿಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇಬ್ಬರು ಯುವತಿಯರು ಗೆಳತಿಯರಾಗಿದ್ದು, ಪರಸ್ಪರ ಅನ್ಯೋನ್ಯತೆಯಿಂದ ಇದ್ದರು. ಇದೇ ಕಾರಣದಿಂದ ಯುವತಿ ಮನೆಗೆ ಭೇಟಿ ನೀಡಿದ್ದಳು. ಆದರೆ ಇದನ್ನೇ ನೆಪ ಮಾಡಿಕೊಂಡು ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವತಿಯ ಮನೆಗೆ ದಾಳಿ ನಡೆಸಿ ಅಲ್ಲಿ ಗಲಾಟೆ ಎಬ್ಬಿಸಿ ಮನೆಯವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಮಾತ್ರವಲ್ಲ ನಂತರ ಅಲ್ಲಿಗೆ ಪೊಲೀಸರನ್ನೂ ಕರೆಸಿ ಭೀತಿಯ ವಾತಾವರಣ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಾಲ್ವರು ಸಂಘಪರಿವಾರದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ, ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version