Home ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸವಲತ್ತುಗಳ ವಿತರಣಾ ಸಮಾರಂಭ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸವಲತ್ತುಗಳ ವಿತರಣಾ ಸಮಾರಂಭ

ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ. ಮತ್ತು ಕಾಮಗಾರಿ ಮಜ್ದೂರಿ ಸಂಘ ಬೆಂಗಳೂರು ನಗರ ಜಿಲ್ಲೆ ಇದರ ಅಡಿಯಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ಬೆಂಗಳೂರಿನ ಆಸ್ಟಿನ್ ಟೌನ್ ನಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಬಿಎಂಎಸ್ ಗೌರವಾಧ್ಯಕ್ಷ ಆಯನೂರು ಮಂಜುನಾಥ್, ಬಿಬಿಎಂಪಿ ಮಾಜಿ ಮಹಾಪೌರ ಗೌತಮ್ ಕುಮಾರ್, ಮಾಜಿ ಪಾಲಿಕೆ ಸದಸ್ಯರಾದ ಶಿವಕುಮಾರ್, ರಾಮಚಂದ್ತ, ಬಿಎಂಎಸ್ ಮಾಜಿ ಅಧ್ಯಕ್ಷ ಡಿ.ರಾಮಮೂರ್ತಿ. ಬಿಎಂಎಸ್ ನ ಉಪಾಧ್ಯಕ್ಷ ವೆಂಕಟೇಶ್. ಎಂ. ಮತ್ತಿತರರು ಹಾಜರಿದ್ದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಯೋಗಕ್ಷೇಮ ಕ್ಕಾಗಿ ಒಂದು ಮಂಡಳಿಯನ್ನು ಅನುಷ್ಠಾನಕ್ಕೆ ತರಲಾಯಿತು. ಕಲ್ಯಾಣ ಮಂಡಳಿ ಮದುವೆ, ಮನೆ ನಿರ್ಮಾಣ, ಶಿಕ್ಷಣಕ್ಕಾಗಿ ಸಹಾಯ ಧನ ಒದಗಿಸಲಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಐದರಿಂದ ಒಂದಲಕ್ಷದವರೆಗೆ ಸಹಾಯ ಧನ ಒದಗಿಸಲಾಗುತ್ತದೆ. ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕ ಸಾವನ್ನಪ್ಪಿದ್ದರೆ ಅವರಿಗೆ ಐದು ಲಕ್ಷದವರೆಗೆ ಪರಿಹಾರ ನೀಡಲಾಗುತ್ತದೆ. ಭಾರತೀಯ ಮಜ್ದೂರ್ ಸಂಘ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಬಿಎಂಎಸ್ ಸಂಘದಿಂದ ಅನೇಕ ಹುದ್ದೆಯನ್ನು ಅಲಂಕರಿಸಿದ್ದೇನೆ ಹೇಳಿದರು.

ಈಗಿನ ಬಿಜೆಪಿ ಸರ್ಕಾರದಲ್ಲಿ ಒಬ್ಬ ಕಾರ್ ಡ್ರೈವರ್ ನನ್ನು ಕಾರ್ಮಿಕ ಸಚಿವರನ್ನಾಗಿ ಮಾಡಿದೆ. ಪ್ರಸ್ತುತ ಅರಬೈಲ್ ಶಿವರಾಂ ಅವರು ಕಾರ್ಮಿಕ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮೂಲತಃ ಟ್ರಕ್ ಚಾಲಕರಾಗಿ ಈ ಮಟ್ಟಕ್ಕೆ ಬೆಳೆದು ಬಂದಿರುವ ಅವರು ಕಾರ್ಮಿಕರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ಬು ಜಾರಿ ತಂದಿದೆ. ಇವುಗಳನ್ನು ಪ್ರತಿಯೊಬ್ಬ ಕಾರ್ಮಿಕ ಸದುಪಯೋಗ ಪಡಿಸಿಕೊಳಬೇಕು ಎಂದರು.

ಬಿಎಂಎಸ್ ಉಪಾಧ್ಯಕ್ಷ ವೆಂಕಟೇಶ್ ಎಂ. ಮಾತನಾಡಿ, ಇಂದು ಸಾಂಕೇತಿಕವಾಗಿ ಇಪ್ಪತ್ತು ಮಂದಿ ಕಟ್ಟಡ ಕಾರ್ಮಿಕರಿಗೆ ಮರಣ, ಮದುವೆ,ವಿವಿಧ ಸಹಾಯಧನ ವಿತರಣೆ ಮಾಡಲಾಗುತ್ತದೆ. ಉಳಿದವರಿಗೆ ಅವರ ಮನೆಗಳಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 20ಮಂದಿ ಕಟ್ಟಡ ಕಾರ್ಮಿಕರಿಗೆ ಮರಣ, ಮದುವೆ, ಇತರೆ ಸಹಾಯ ಧನ ವಿತರಿಸಲಾಯಿತು.

Join Whatsapp
Exit mobile version