ಮಹಾರಾಷ್ಟ್ರ : ಒಂದೆಡೆ ಮಸೀದಿಗಳಲ್ಲಿನ ಲೌಡ್ ಸ್ಪೀಕರನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿ ಆರೆಸ್ಸೆಸ್ ಮತ್ತದರ ಸಹ ಸಂಘಟನೆಗಳು ಇಡೀ ದೇಶದಲ್ಲಿ ದ್ವೇಷ ಹರಡುತ್ತಿದೆ. ಇನ್ನೊಂದೆಡೆ ಅದೇ RSS ಪ್ರಧಾನ ಕಚೇರಿ ಇರುವ ನಾಗ್ಪುರ ಜಿಲ್ಲೆಯ ಬುಲ್ಧಾನ ಎಂಬ ಗ್ರಾಮದಲ್ಲಿನ ಹಿಂದೂಗಳೂ ತಮ್ಮೂರಿನ ಮಸೀದಿಗೆ ಈದ್ ದಿನದಂದು ಲೌಡ್ ಸ್ಪೀಕರನ್ನು ಉಡುಗೊರೆಯಾಗಿ ಕೊಟ್ಟು ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಇದರ ವಿಶೇಷತೆ ಎಂದರೆ ಗ್ರಾಮದ ಹಿಂದೂಗಳು ತಮ್ಮಲ್ಲಿಯೇ ದೇಣಿಗೆ ಸಂಗ್ರಹಿಸಿ ಈ ಉಡುಗೊರೆಯನ್ನು ಮಸೀದಿಯಲ್ಲಿ ಆಝಾನ್ ಕೂಗಲು ಬಳಸುವ ಉದ್ದೇಶಕ್ಕಾಗಿ ನೀಡಿದ್ದಾರೆ ಎನ್ನುವುದಾಗಿದೆ.
ಮಸೀದಿಗಳ ಧ್ವನಿವರ್ಧಕವನ್ನು ತೆಗೆದು ಹಾಕಬೇಕೆಂದು ರಾಜ್ ಠಾಕ್ರೆ ಹೇಳುತ್ತಿರುವಾಗ ನೀವು ಮಸೀದಿಗೆ ಧ್ವನಿವರ್ಧಕವನ್ನು ದಾನ ಮಾಡಲು ಕಾರಣ ಏನು ಎಂಬುವುದನ್ನು ಪತ್ರಕರ್ತರು ಹಿಂದೂ ಬಾಂಧವರನ್ನು ಪ್ರಶ್ನೆ ಮಾಡಿದಾಗ, ಕಾರ್ಖಾನೆ ಹಾಗೂ DJ ಗಳ ಶಬ್ದಗಳು ರಾಜಕಾರಣಿಗಳ ಭಾಷಣದಿಂದ ರಾಜ್ ಠಾಕ್ರೆಗೆ ಸಮಸ್ಯೆ ಇಲ್ಲದೇ ಇರುವಾಗ, 5 ನಿಮಿಷದ ಆಝಾನ್ ನಿಂದ ಇವರಿಗೇನು ಸಮಸ್ಯೆ ಎಂದು ಪ್ರಶ್ನೆ ಮಾಡಿದ್ದಾರೆ .
ತನ್ನ ನೀಚ ರಾಜಕೀಯ ಸ್ವಾರ್ಥಕ್ಕಾಗಿ ಮರಾಠಿಗಳನ್ನು ಮರುಳು ಮಾಡುವ ರಾಜ್ ಠಾಕ್ರೆಯ ಹುನ್ನಾರವನ್ನು ಮರಾಠಿ ಜನ ವಿಫಲಗೊಳಿಸುತ್ತಾರೆ ಎಂದು ಈ ಗ್ರಾಮದ ಹಿಂದೂಗಳು ಹೇಳಿದ್ದಾರೆ.