Home ಟಾಪ್ ಸುದ್ದಿಗಳು ಶಿರವಸ್ತ್ರ- ಕೇಸರಿ ಶಾಲು ವಿವಾದ: ರಾಜ್ಯದ ಎಲ್ಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ

ಶಿರವಸ್ತ್ರ- ಕೇಸರಿ ಶಾಲು ವಿವಾದ: ರಾಜ್ಯದ ಎಲ್ಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ

ನವದೆಹಲಿ: ಹಿಜಾಬ್ ಮತ್ತು ಕೇಸರಿ ಶಾಲಿನ ವಿಷಯದಲ್ಲಿ ಸಂಘರ್ಷ ಕಂಡುಬಂದಿರುವ ರಾಜ್ಯದ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮಂಗಳವಾರ ದೆಹಲಿಯಿಂದ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ ಅವರು, ಸಂಘರ್ಷ ಮುಂದುವರಿದಿರುವ ಕಾಲೇಜುಗಳಿಗೆ ಕನಿಷ್ಠ ಮೂರು ದಿನ ಅವಧಿಗೆ ರಜೆ ಘೋಷಿಸುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ.

ಈ ಸಂಬಂಧ ಸಚಿವರು ಕೂಡಲೇ ಎಲ್ಲ ಜಿಲ್ಲೆಗಳಿಂದ ಮಾಹಿತಿ ಕಲೆ ಹಾಕಿ, ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version