ಮಂಗಳೂರು: ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ವಿದ್ಯಾರ್ಥಿನಿಯರಿಗೆ ಶಿಕ್ಷಣದಿಂದ ವಂಚಿಸುವ ವಿರುದ್ಧ ಇಂದು ಮಂಗಳೂರಿನಲ್ಲಿ ಎಂಎಸ್ ಎಫ್ ಪ್ರತಿಭಟನೆ ನಡೆಸಿತ್ತು.
ಮಂಗಳೂರಿನ ಕ್ಲಾಕ್ ಟಾವರ್ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ MSF ರಾಜ್ಯ ಸಮಿತಿ ಸಂಯೋಜಕ ಇಸ್ರಾರ್ ಗೂಡಿನಬಳಿ ಕೇಸರಿ ಶಾಲುಗಳ ಹಿಂದೆ ಬಿಜೆಪಿ ಸರ್ಕಾರ ಇದೆ. ವಿದ್ಯಾರ್ಥಿಗಳ ನಡುವೆ ವಿಷ ಬೀಜವನ್ನು ಸಂಘಪರಿವಾರ ಹರಡುತ್ತಿದ್ದು, ಇದರ ಪ್ರತಿಫಲ ಮುಂದಿನ ಚುನಾವಣೆಯಲ್ಲಿ ನೀವು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಪುದು ಗ್ರಾಮ ಪಂಚಾಯತ್ ಸದಸ್ಯ ಆಸೀರ್ ಪೇರಿಮಾರ್, MSF ನಾಯಕ ಮುನಾಝ್ ತೋಡರ್ MSF ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಬಿಲ್ ಪೇರಿಮಾರ್, ಅರಫತ್ ಮಿತ್ತಬೈಲ್, ಶಾಹಿದ್ ಕೈಕಂಬ, ಯೂತ್ ಲೀಗ್ ಸದಸ್ಯರಾದ ಶಬೀರ್ ಹಜಾರಿ ಪಡವರಕಲ್ಲು, ತೈಯ್ಯಬ್ ಫೈಝ್, ಭಾತಿಷ್ ಅಳಕೆಮಜಲು ಮತ್ತಿತರರು ಭಾಗವಹಿಸಿದ್ದರು .