Home ಟಾಪ್ ಸುದ್ದಿಗಳು ಹಿಜಾಬ್, ಬುರ್ಖಾ ಪುರುಷರ ದಬ್ಬಾಳಿಕೆಯ ಸಂಕೇತಗಳು: ಲೇಖಕಿ ತಸ್ಲೀಮಾ ನಸ್ರೀನ್

ಹಿಜಾಬ್, ಬುರ್ಖಾ ಪುರುಷರ ದಬ್ಬಾಳಿಕೆಯ ಸಂಕೇತಗಳು: ಲೇಖಕಿ ತಸ್ಲೀಮಾ ನಸ್ರೀನ್

ಢಾಕಾ: ಹಿಜಾಬ್, ಕೇಸರಿ ವಿವಾದ ಕರ್ನಾಟಕದಲ್ಲಿ ಹುಟ್ಟಿ ದೇಶಾದ್ಯಂತ ಹರಡಿದ್ದು, ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ “ ಹಿಜಾಬ್, ಬುರ್ಖಾ ಅಥವಾ ನಿಖಾಬ್ ಪುರುಷರ ದಬ್ಬಾಳಿಕೆಯ ಸಂಕೇತಗಳಾಗಿವೆ” ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಶಿಕ್ಷಣದ ಹಕ್ಕು ಧರ್ಮದ ಹಕ್ಕು ಎಂಬುದು ನಾನು ನಂಬುತ್ತೇನೆ. ಕೆಲವು ಮುಸ್ಲಿಮರು ಹಿಜಾಬ್ ಅತ್ಯಗತ್ಯ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಅದು ಅನಿವಾರ್ಯವಲ್ಲ ಎಂದು ಭಾವಿಸುತ್ತಾರೆ. ಆದರೆ 7ನೇ ಶತಮಾನದಲ್ಲಿ ಕೆಲವು ಸ್ತ್ರೀ ದ್ವೇಷವಾದಿಗಳು ಹಿಜಾಬ್ ಪರಿಚಯಿಸಿದರು. ಏಕೆಂದರೆ ಆ ಸಮಯದಲ್ಲಿ ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿತ್ತು ಎಂದಿದ್ದಾರೆ.

ಮಹಿಳೆಯರನ್ನು ನೋಡಿದರೆ ಪುರುಷರಿಗೆ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಹಿಜಬ್ ಪರಿಚಯವಾಗಿತ್ತು. ಹೀಗಾಗಿ ಮಹಿಳೆಯರು ಹಿಜಬ್ ಅಥವಾ ಬುರ್ಕಾ ಧರಿಸಬೇಕಾಯಿತು ಹಾಗೂ ಪರುಷರಿಂದ ತಮ್ಮನ್ನು ಮರೆಮಾಡಿಕೊಳ್ಳಬೇಕಾಯಿತು ಎಂದು ತಿಳಿಸಿದರು.

ಇದು 21 ನೇ ಶತಮಾನ, ಆಧುನಿಕ ಸಮಾಜ. ಮಹಿಳೆಯರು ಪುರುಷರೊಂದಿಗೆ ಸಮಾನರು ಎಂಬುದನ್ನು ನಾವು ಕಲಿತಿದ್ದೇವೆ. ಆದ್ದರಿಂದ ಹಿಜಾಬ್, ನಿಖಾಬ್ ಅಥವಾ ಬುರ್ಕಾ ದಬ್ಬಾಳಿಕೆಯ ಸಂಕೇತಗಳಾಗಿವೆ ಎಂದು ತಸ್ಲೀಮಾ ಹೇಳಿದ್ದಾರೆ.

Join Whatsapp
Exit mobile version