ತಲಪಾಡಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನದ ಅಂಗವಾಗಿ ಪಿ.ಎಫ್.ಐ ತಲಪಾಡಿ ಏರಿಯಾ ಸಮಿತಿಯ ಆಶ್ರಯದಲ್ಲಿ ಕೆಸಿ ನಗರ ಜಂಕ್ಷನ್ ನಲ್ಲಿ ಧ್ವಜಾರೋಹಣ ನಡೆಸಲಾಯಿತು. ಪಿ.ಎಫ್.ಐ ತಲಪಾಡಿ ಏರಿಯಾ ಸಮಿತಿ ಅಧ್ಯಕ್ಷರಾದ ಹಕೀಮ್ ಕೆಸಿ ನಗರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ನ ಖಲೀಲ್ ಅಝ್ಹರಿ ಉಸ್ತಾದ್ ರವರು ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಅಪಾಯವನ್ನು ಎದುರಿಸತೊಡಗಿದೆ. ಮತೀಯ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಈ ಶಕ್ತಿಗಳಿಂದಾಗಿ ಈ ದೇಶದ ಮುಸ್ಲಿಮರು, ಕ್ರೈಸ್ತರು,ದಲಿತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ‘ಗಣ ರಾಜ್ಯವನ್ನು ರಕ್ಷಿಸೋಣ” ಎಂಬ ಘೋಷಣೆಯಡಿ ಈ ಬಾರಿಯ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು ಇಲ್ಲಿನ ಶೋಷಿತರ ಸಬಲೀಕರಣಕ್ಕಾಗಿ ಸದಾ ಮುಂಚೂಣಿಯಲ್ಲಿರಲಿದೆ ಎಂದರು.
ಸಭೆಯನ್ನುದ್ದೇಶಿಸಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್ ಮಾತನಾಡಿದರು. ವೇದಿಕೆಯಲ್ಲಿ ಪಿ.ಎಫ್.ಐ ಡಿವಿಷನ್ ಅಧ್ಯಕ್ಷರಾದ ಶಕೀಲ್ ಕೆಸಿ ರೋಡ್, ಎಸ್.ಡಿ.ಪಿ.ಐ ತಲಪಾಡಿ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಆಸಿಫ್ ಕೆಸಿ ನಗರ, ಕಾರ್ಯದರ್ಶಿ ರಶೀದ್ ಇಂಜಿನಿಯರ್, ತಲಪಾಡಿ ಗ್ರಾಪಂ ಸದಸ್ಯರಾದ ಟಿ. ಇಸ್ಮಾಯಿಲ್, ಅಬ್ದುರ್ರಹ್ಮಾನ್, ಝಹೀರ್ ಉಪಸ್ಥಿತರಿದ್ದರು. ಮೊಯ್ದಿನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.