ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕಗಿಂತ ಉತ್ತಮವಾದ ಹೆದ್ದಾರಿಗಳ ನಿರ್ಮಾಣ : ಕೇಂದ್ರ ಸಚಿವ ಗಡ್ಕರಿ

- Advertisement -

ಧಾರ್​ : ಮುಂದಿನ ಎರಡು ವರ್ಷಗಳಲ್ಲಿ ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿಗಳು ಅಮೆರಿಕದಲ್ಲಿನ ಹೆದ್ದಾರಿಗಳಿಗಿಂತ ಉತ್ತಮವಾಗಿರಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರು ತಿಳಿಸಿದರು.

- Advertisement -

ಇಲ್ಲಿನ 10 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿವೆ ಎಂದು ಭರವಸೆ ನೀಡಿದರು.

ಅಮೆರಿಕದ ಮಾಜಿ ಅಧ್ಯಕ್ಷ ಜಾನ್​ ಎಫ್​ ಕೆನಡಿ ಅವರ ”ಅಮೆರಿಕ ಶ್ರೀಮಂತವಾಗಿರುವ ಕಾರಣದಿಂದ ಅಮೆರಿಕದ ರಸ್ತೆಗಳು ಚೆನ್ನಾಗಿಲ್ಲ. ಅಮೆರಿಕ ಶ್ರೀಮಂತವಾಗಿರುವುದೇ ಅಮೆರಿಕದ ರಸ್ತೆಗಳಿಂದ” ಎಂಬ ಘೋಷವಾಕ್ಯವನ್ನು ಸಚಿವ ಗಡ್ಕರಿ ಸ್ಮರಿಸಿದರು.

- Advertisement -

ಇದು ಹುಸಿ ಭರವಸೆಯಲ್ಲ, ಮುಂದಿನ ಎರಡು ವರ್ಷಗಳಲ್ಲಿ ಬದ್ಧತೆಯಿಂದ ಅಮೆರಿಕದ ರಸ್ತೆಗಳನ್ನು ಮೀರಿಸುವಂತ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿಕೊಡುತ್ತೇವೆ ಎಂಬ ದೃಢವಾದ ಭರವಸೆಯನ್ನು ಮಧ್ಯಪ್ರದೇಶದ ಜನತೆಗೆ ನೀಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ಕೇಂದ್ರ ಸಚಿನಾಗಿ ಮಧ್ಯಪ್ರದೇಶದ ಅಭಿವೃದ್ಧಿ ಕೆಲಸಗಳನ್ನು ಗಮನಿಸುತ್ತಿರುವುದಾಗಿ ಹೇಳಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ನನಗೆ ವಹಿಸಿದರು. ಇದರ ಪರಿಣಾಮ ಸಾರಿಗೆ ವ್ಯವಸ್ಥೆ, ಮೇಲ್ಸೆತುವೆಗಳು, ಹೆದ್ದಾರಿಗಳು ಸಾಕಷ್ಟು ಬೆಳವಣಿಗೆ ಕಂಡಿವೆ ಎಂದರು.

- Advertisement -


Must Read

Related Articles