Home ಟಾಪ್ ಸುದ್ದಿಗಳು UAEಯಲ್ಲಿ ಡೆಲ್ಟಾ ಆತಂಕ : ದೇಶದ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರಿಗೆ ರೂಪಾಂತರಿ ವೈರಸ್ ಸೋಂಕು...

UAEಯಲ್ಲಿ ಡೆಲ್ಟಾ ಆತಂಕ : ದೇಶದ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರಿಗೆ ರೂಪಾಂತರಿ ವೈರಸ್ ಸೋಂಕು !

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ದಾಖಲಾಗುವ ಪ್ರತಿ ಮೂರು ಕೋವಿಡ್-19 ಪ್ರಕರಣಗಳಲ್ಲಿ ಒಂದು ಹೆಚ್ಚು ಅಪಾಯಕಾರಿಯಾಗಿರುವ ಡೆಲ್ಟಾ ರೂಪಾಂತರವಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಸಾವಿನ ಸಂಖ್ಯೆ ಮತ್ತು ಅಪಾಯಕಾರಿ ರೂಪಾಂತರಗಳ ಹರಡುವಿಕೆ ಹೆಚ್ಚಾಗಿದೆ. ನಿಯಮಗಳನ್ನು ಅನುಸರಿಸದಿರುವುದು ಮತ್ತು ಲಸಿಕೆ ತೆಗೆದುಕೊಳ್ಳಲು ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ನಡೆದ ವಿಶೇಷ ಕೋವಿಡ್-19 ಮಾಹಿತಿ ನೀಡುವ ಸಂದರ್ಭದಲ್ಲಿ ಈ ಅಂಕಿ ಅಂಶವನ್ನು ಬಿಡುಗಡೆ ಮಾಡಲಾಗಿದೆ. ಲಸಿಕೆ ಪಡೆಯದವರಲ್ಲಿ 94% ಸಾವುಗಳು ಸಂಭವಿಸಿವೆ. ಲಸಿಕೆ ಪಡೆದವರಲ್ಲಿ ಈ ಪ್ರಮಾಣ ಗಣನೀಯವಾಗಿ ಕಡಿಮೆ ಎಂದು ಅಂಕಿ ಅಂಶಗಳು ತಿಳಿಸಿದೆ.

ಯುಎಇ ದೇಶದ ಒಟ್ಟು ಜನಸಂಖ್ಯೆಯ 71 ಶೇಕಡಾ ಜನರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದು ಲಸಿಕೆ ಪಡೆಯಲು ಅರ್ಹರಾಗಿರುವ ವಿಭಾಗದ 91.9 ಶೇಕಡಾ ಆಗಿದೆ ಎಂದು ದಾಖಲೆಗಳು  ಹೇಳುತ್ತದೆ.

Join Whatsapp
Exit mobile version