Home ಕರಾವಳಿ ಕಲುಷಿತ ನೀರು, ಮಂಗಳೂರು ಮಹಾನಗರ ಪಾಲಿಕೆಗೆ ಛೀಮಾರಿ ಹಾಕಿದ ಹೈಕೋರ್ಟ್

ಕಲುಷಿತ ನೀರು, ಮಂಗಳೂರು ಮಹಾನಗರ ಪಾಲಿಕೆಗೆ ಛೀಮಾರಿ ಹಾಕಿದ ಹೈಕೋರ್ಟ್

ಮಂಗಳೂರು: ಕುಡಿಯುವ ನೀರಿನ ಜೊತೆಗೆ ಕಲುಷಿತ ನೀರು ಸೇರುವುದನ್ನು ತಡೆಯುವಲ್ಲಿ ವಿಫಲವಾಗಿರುವ ಮಂಗಳೂರು ಮಹಾನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಪೀಠವು ಛೀಮಾರಿ ಹಾಕಿದೆ.

ಮಂಗಳೂರು ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಪೀಠವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ‌ ನೀಡಿದೆ.

ಪಚ್ಚನಾಡಿ ತ್ಯಾಜ್ಯ ಘಟಕದಿಂದ ಮಲಿನ ನೀರು ಫಲ್ಗುಣಿ ನದಿಗೆ ಸೇರುವುದು ಕೆಎಸ್‌ಪಿಸಿಬಿ ವರದಿಯಿಂದ ಸ್ಪಷ್ಟವಾಗಿದೆ. ಮಳವೂರು ನೀರು ಸಂಸ್ಕರಣಾ ಘಟಕ ಇನ್ನೊಂದು ಸಮಸ್ಯೆ ಎನಿಸಿದೆ. ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಖಾಸಗಿ ಸಂಸ್ಥೆಗೆ ನೀಡಿರುವುದೇಕೆ ಎಂದು ಹೈಕೋರ್ಟ್ ಪೀಠವು ತೀವ್ರವಾಗಿ ಪ್ರಶ್ನಿಸಿತು.

Join Whatsapp
Exit mobile version