Home Uncategorized ಮಡಿಕೇರಿ: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶ್ನಿಸಬೇಕು: ಅಮೀನ್ ಮುಹ್ಸಿನ್

ಮಡಿಕೇರಿ: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶ್ನಿಸಬೇಕು: ಅಮೀನ್ ಮುಹ್ಸಿನ್

ಮಡಿಕೇರಿ: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬೇಕು, ಇಲ್ಲದಿದ್ದರೆ ಮುಂದೆ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ ಎಂದು ಬದ್ರಿಯಾ ಜಮಾಅತ್ ನ ಅಧ್ಯಕ್ಷ ಹಾಗೂ ಮಡಿಕೇರಿ ನಗರಸಭೆಯ ಎಸ್ ಡಿಪಿಐ ಸದಸ್ಯ ಅಮೀನ್ ಮುಹ್ಸಿನ್ ಹೇಳಿದ್ದಾರೆ.

ಹಿಜಾಬ್ ಇಸ್ಲಾಮ್ ನ ಅತ್ಯಗತ್ಯ ಆಚರಣೆ ಅಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಜನರ ನಂಬಿಕೆಯನ್ನು ಹುಸಿಗೊಳಿಸಿದೆ ಎಂದು ನೋವನ್ನು ತೋಡಿಕೊಂಡರು.

ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬೇಕು. ಇಲ್ಲದಿದ್ದರೆ  ಮುಂದೆ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Join Whatsapp
Exit mobile version