Home ಟಾಪ್ ಸುದ್ದಿಗಳು ಮೂರನೇ ಮಗುವನ್ನು ಹೊಂದಿದ್ದ ಕಾರಣಕ್ಕೆ ಸರಕಾರಿ ಕೆಲಸದಿಂದ ಅಧಿಕಾರಿ ವಜಾ: ಆದೇಶ ಎತ್ತಿ ಹಿಡಿದ ಹೈಕೋರ್ಟ್

ಮೂರನೇ ಮಗುವನ್ನು ಹೊಂದಿದ್ದ ಕಾರಣಕ್ಕೆ ಸರಕಾರಿ ಕೆಲಸದಿಂದ ಅಧಿಕಾರಿ ವಜಾ: ಆದೇಶ ಎತ್ತಿ ಹಿಡಿದ ಹೈಕೋರ್ಟ್

ನವದೆಹಲಿ: ಮೂರನೇ ಮಗು ಹೊಂದಿದ ಕಾರಣಕ್ಕೆ ಸರಕಾರಿ ಕೆಲಸದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿದ್ದ ಸರ್ಕಾರಿ ಅಧಿಕಾರಿಯ ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಗ್ವಾಲಿಯರ್ ಪೀಠ ವಜಾಗೊಳಿಸಿದೆ. ಮೂರನೇ ಮಗುವನ್ನು ಪಡೆದ ನಂತರ ಸರ್ಕಾರಿ ಕೆಲಸದಿಂದ ಅನರ್ಹಗೊಂಡಿದ್ದ ಅಧಿಕಾರಿಯ ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿತು.
ಮೇಲ್ಮನವಿಯನ್ನು ವಜಾಗೊಳಿಸುವಾಗ, ಇಬ್ಬರು ನ್ಯಾಯಾಧೀಶರ ಪೀಠವು ನಾಗರಿಕ ಸೇವೆಗಳ ಕಾಯ್ದೆ 1961 ರ ಪ್ರಕಾರ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೂರನೇ ಮಗುವನ್ನು ಪಡೆದ ನಂತರ ಆತನನ್ನು ಕೆಲಸದಿಂದ ಅನರ್ಹಗೊಳಿಸಲಾಗುವುದು ಎಂದು ಹೇಳಿದೆ.


ಈ ಕಾಯ್ದೆ 26 ಜನವರಿ 2001 ರಿಂದ ಜಾರಿಗೆ ಬಂದಿದೆ. ಆದ್ದರಿಂದ ನೀವು ಕೆಲಸಕ್ಕೆ ಅರ್ಹರಲ್ಲ ಎಂದು ನ್ಯಾಯಾಲಯವು ಹೇಳಿದೆ.
ಲಕ್ಷ್ಮಣ್ ಸಿಂಗ್ ಬಾಗೆಲ್ ಎಂಬ ಅಧಿಕಾರಿ 2009 ರಲ್ಲಿ ಸಹಾಯಕ ಬೀಜ ಪ್ರಮಾಣೀಕರಣ ಅಧಿಕಾರಿಯ ಪರೀಕ್ಷೆಯನ್ನು ಬರೆದಿದ್ದರು. 2009 ರ ಜೂನ್ 30 ರಂದು ಅರ್ಜಿ ಸಲ್ಲಿಸುವಾಗ, ಬಾಗೇಲ್ ಅವರಿಗೆ ಇಬ್ಬರು ಮಕ್ಕಳಿದ್ದರು. ನವೆಂಬರ್ 20, 2009 ರಂದು, ಅವರು ತಮ್ಮ ಮೂರನೇ ಮಗುವಿನ ತಂದೆಯಾದರು. ಲಕ್ಷ್ಮಣ್ ಅವರು ರಾಜ್ಯ ಸರ್ಕಾರದಇಲಾಖೆಗೆ ಸೇರ್ಪಡೆಗೊಳ್ಳುವ ಸಮಯದಲ್ಲಿ ತನ್ನ ಮೂರನೇ ಮಗುವಿನ ವಿವರಗಳನ್ನು ಅಫಿಡವಿಟ್ ನಲ್ಲಿ ನೀಡಿರಲಿಲ್ಲ. ಆದರೆ ಮೂರನೇ ಮಗುವಿನ ಮಾಹಿತಿಯನ್ನು ನಿವಾಸ ಪ್ರಮಾಣಪತ್ರ ಮತ್ತು ಪಡಿತರ ಚೀಟಿಯಲ್ಲಿ ದಾಖಲಿಸಲಾಗಿದೆ. ಈ ಆಧಾರದ ಮೇಲೆ ಅವರನ್ನು ಕೆಲಸದಿಂದ ಅನರ್ಹಗೊಳಿಸಲಾಯಿತು ಮತ್ತು ಸತ್ಯವನ್ನು ಮರೆಮಾಚಿದ್ದಕ್ಕಾಗಿ ಸಂಬಂಧಪಟ್ಟ ಇಲಾಖೆ ಲಕ್ಷ್ಮಣ್ ಸಿಂಗ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಶಿಫಾರಸು ಮಾಡಿತ್ತು.


ಅರ್ಜಿಯ ಪ್ರಕ್ರಿಯೆ ವೇಳೆ ತಾನು ಇಬ್ಬರು ಮಕ್ಕಳ ತಂದೆಯಾಗಿದ್ದೆ. ಬಳಿಕ ಮೂರನೆಯ ಮಗು ಜನಿಸಿದೆ, ಆದ್ದರಿಂದ ಆ ಸಮಯದಲ್ಲಿ ಕಾನೂನು ತಮಗೆ ಅನ್ವಯವಾಗಲಿಲ್ಲ ಎಂದು ಅರ್ಜಿದಾರರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಆದರೆ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ.

Join Whatsapp
Exit mobile version