ವಯನಾಡ್ ಭೂಕುಸಿತ ಸಂತ್ರಸ್ತರಿಗೆ HIF ಇಂಡಿಯಾ ನೆರವು

Prasthutha|

►’ಪ್ರಾಜೆಕ್ಟ್ ಆಶಿಯಾನ’ಕ್ಕೆ ಶಿಲಾನ್ಯಾಸ

- Advertisement -


ವಯನಾಡ್: ಎಚ್ ಐಎಫ್ ಇಂಡಿಯಾ ವತಿಯಿಂದ ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ‘ಆಶಿಯಾನ ಯೋಜನೆ’ಯಡಿ 30 ಸೆಂಟ್ಸ್ ಭೂಮಿಯಲ್ಲಿ ಐದು ಮನೆಗಳ ನಿರ್ಮಾಣಕ್ಕೆ ರವಿವಾರ ಶಿಲಾನ್ಯಾಸ ನೆರವೇರಿಲಾಯಿತು.


ವಯನಾಡ್ ದುರಂತ ಸಂತ್ರಸ್ತರ ಕುಟುಂಬಗಳಿಗೆ ‘ಆಶಿಯಾನ ಯೋಜನೆ’ಯಡಿ ಐದು ಹೊಸ ಮನೆಗಳನ್ನು ನಿರ್ಮಿಸಿಕೊಡಲು ಎಚ್ ಐಎಫ್ ಇಂಡಿಯಾ ಉದ್ದೇಶಿಸಿದೆ. 725 ಚದರ ಅಡಿ ಅಳತೆಯ ಪ್ರತಿಯೊಂದು ಮನೆಯು 2 ಮಲಗುವ ಕೋಣೆಗಳು, ಹಾಲ್ ಮತ್ತು ಅಡುಗೆಮನೆಯನ್ನು ಒಳಗೊಂಡಿರುತ್ತದೆ. ಪ್ರತಿ ಮನೆಗೆ ಅಂದಾಜು ವೆಚ್ಚವು 10 ಲಕ್ಷ ರೂ. ಆಗಲಿದೆ ಸಂಘಟನೆಯ ಪ್ರವರ್ತಕರು ತಿಳಿಸಿದ್ದಾರೆ.

- Advertisement -


ಕಾರ್ಯಕ್ರಮದಲ್ಲಿ ವಯನಾಡು ಶಾಸಕ ಟಿ.ಸಿದ್ದೀಕ್, ದಾರುಲ್ ಫಲಾಹಿಲ್ ಇಸ್ಲಾಮಿಯ ಕಾರ್ಯದರ್ಶಿ ಮುಹಮ್ಮದ್ ಅಲಿ ಫೈಝಿ, ತ್ರಿಕೈಪಟ್ಟಾ ಸೇಂಟ್ ಜಾನ್ ಪಾಲ್ II ಚರ್ಚ್ ನ ಧರ್ಮಗುರು ಬಿನೋಯಿ ಕಲಪೊರಕ್ಕಲ್, ಶ್ರೀರಾಮ ದೇವಸ್ಥಾನದ ಸನಲ್ ಪೂಜಾರಿ, ಸಾಮಾಜಿಕ ಕಾರ್ಯಕರ್ತ ನಾಸಿರ್ ಮನು ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಎಚ್ ಐಎಫ್ ಇಂಡಿಯಾದ ರಿಝ್ವಾನ್ ಪಾಂಡೇಶ್ವರ, ನಬಿಲ್ ಕುದ್ರೋಳಿ, ಸಾಜಿದ್ ಎ.ಕೆ. ಮತ್ತು ಆಶಿಯಾನ ಯೋಜನೆಯ ಮುಖ್ಯಸ್ಥ ಎಸ್.ಎಂ.ಫಾರೂಕ್ ಹಾಜರಿದ್ದರು.



Join Whatsapp
Exit mobile version