Home Uncategorized ತಮಿಳು ಸಿನೆಮಾ ಜನಪ್ರಿಯ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ !

ತಮಿಳು ಸಿನೆಮಾ ಜನಪ್ರಿಯ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ !

►ಎರಡು ದಿನಗಳ ಹಿಂದಷ್ಟೇ ಕೋವಿಡ್ ಲಸಿಕೆ ಹಾಕಿಸಿದ್ದ ನಟ

ತಮಿಳು ಸಿನೆಮಾದ ಜನಪ್ರಿಯ ಹಾಸ್ಯನಟ ವಿವೇಕ್ ಅವರಿಗೆ ಹೃದಯಾಘಾತವಾಗಿದೆ. ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ವಿವೇಕ್ ಅವರು ಇಲ್ಲಿನ ಸರ್ಕಾರಿ ಒಮಾಂಡುರಾರ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು. ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವಂತೆ  ಅವರು ಕರೆ ನೀಡಿದ್ದರು. ಲಸಿಕೆ ಕೋವಿಡನ್ನು ತಡೆಯುವುದಿಲ್ಲವಾದರೂ ವೈರಸ್ ನ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ ಎಂದು ನಟ ಹೇಳಿದ್ದರು. ಹೃದಯಾಘಾತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ, ಅದಕ್ಕೂ ಲಸಿಕೆ ಹಾಕಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಕುರಿತು ಆಸ್ಪತ್ರೆಯ ಮೂಲಗಳು ಏನನ್ನೂ ಬಹಿರಂಗಪಡಿಸಿಲ್ಲ.

Join Whatsapp
Exit mobile version