Home ಟಾಪ್ ಸುದ್ದಿಗಳು ಕಾಲರಾ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಕಾಲರಾ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಬೆಂಗಳೂರು: ಬಿಸಿಲಿನ ತಾಪದಿಂದ ಏಕಾಏಕಿ ಶಂಕಿತ ಕಾಲರಾ ಹಿನ್ನೆಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.


ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಸುದ್ದಿಗೋಷ್ಠಿ ಮಾಡಿದ್ದು, ಬಿಸಿಲಿನ ತಾಪ, ಬಿಸಿಗಾಳಿ, ಕಾಲರಾ ಬಗ್ಗೆ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದ್ದು, ಸಾಂಕ್ರಾಮಿಕ ರೋಗಿಗಳ ಡೇಟಾ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದರು.


ಬರಿ ವಾಂತಿ-ಭೇದಿಯನ್ನು ಕಾಲರಾ ಅಂತಾ ತಿಳಿಬಾರದು. ಶುದ್ದ ನೀರಿನ ಕೊರತೆಯಿಂದಾಗಿ ಕಾಲರಾ ಬರುತ್ತೆ. ಕಳಪೆ ಗುಣಮಟ್ಟದ ಆಹಾರ ಮತ್ತು ನೀರು ಕುಡಿಯುವುದರಿಂದ ಕಾಲರಾ ಬರುವ ಸಾಧ್ಯತೆ ಇದೆ. ಇದು ನೇರವಾಗಿ ಹರಡುವುದಲ್ಲಿ. ಸಂಪರ್ಕ ಇರಬೇಕು ಇಲ್ಲಾ, ನೀವೆ ಸೇವಿಸಿರಬೇಕು ಎಂದು ತಿಳಿಸಿದರು. ಕಾಲರಾದ ಬಗ್ಗೆ ಸುಳ್ಳು ಮಾಹಿತಿಗಳು ಹರಿದಾಡುತ್ತಿದೆ. 50 % ಕಾಲರಾ ಏರಿಕೆ ಆಗಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಬೆಂಗಳೂರು ನಗರದಲ್ಲಿ ಮೂರು ತಿಂಗಳುಗಳಲ್ಲಿ 2 ಪ್ರಕರಣ, ರಾಮನಗರ ಜಿಲ್ಲೆಗಳಲ್ಲಿ 1, ಒಟ್ಟು 6 ಪ್ರಕರಣಗಳು ವರದಿಯಾಗಿದೆ. ಕಾಲರಾ ಔಟ್ ಬ್ರೇಕ್ ಆಗಿಲ್ಲ. ಎಲ್ಲೂ ಕೂಡ ಒಂದೇ ಲೊಕ್ಯಲಿಟಿಯಲ್ಲಿ ಹೆಚ್ಚು ಕೇಸ್ ಪ್ರಕರಣಗಳು ಬಂದಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಮಾತ್ರ ಕಾಲರಾ ಪ್ರಕರಣ ವರದಿಯಾಗಿದೆ ಎಂದರು.


ಕಾಲರಾಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ
• ಕೈ ಶುದ್ದವಾಗಿರಬೇಕು
• ಕೈ ಸ್ವಚ್ಚಗೊಳಿಸಿ ಆಹಾರ ಸೇವಿಸಬೇಕು
• ಶುದ್ದ ಕುಡಿಯುವ ನೀರು ಬಳಸಬೇಕು
• ಸೇವೆಜ್ ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು

Join Whatsapp
Exit mobile version