Home ಟಾಪ್ ಸುದ್ದಿಗಳು ಜೈಲಿನಿಂದ ಸರ್ಕಾರ ನಡೆಸಲು ಬಯಸುವ ಕೇಜ್ರಿವಾಲ್ ಗೆ ವಿಶೇಷ ಸವಲತ್ತು ನೀಡಲು ಆಗುವುದಿಲ್ಲ: ಇ.ಡಿ

ಜೈಲಿನಿಂದ ಸರ್ಕಾರ ನಡೆಸಲು ಬಯಸುವ ಕೇಜ್ರಿವಾಲ್ ಗೆ ವಿಶೇಷ ಸವಲತ್ತು ನೀಡಲು ಆಗುವುದಿಲ್ಲ: ಇ.ಡಿ

ನವದೆಹಲಿ: ‘ಜೈಲಿನಲ್ಲಿದ್ದುಕೊಂಡೇ ಸರ್ಕಾರವನ್ನು ಮುನ್ನಡೆಸಲು ಬಯಸುತ್ತಾರೆ ಎಂಬ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಲು ಆಗುವುದಿಲ್ಲ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ನ್ಯಾಯಾಲಯಕ್ಕೆ ತಿಳಿಸಿದೆ.


ತನ್ನ ವಕೀಲರೊಂದಿಗೆ ಸಮಾಲೋಚನೆ ನಡೆಸುವುದಕ್ಕಾಗಿ ಹೆಚ್ಚು ಸಮಯ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಜಾರಿ ನಿರ್ದೇಶನಾಲಯ ಈ ವಾದ ಮಂಡಿಸಿತು. ಅಲ್ಲದೇ, ಹೆಚ್ಚು ಸಮಯ ನೀಡುವಂತೆ ಕೊರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಗೆ ವಿರೋಧ ವ್ಯಕ್ತಪಡಿಸಿತು.


ಸಿಬಿಐ ಮತ್ತು ಇ.ಡಿ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಅರ್ಜಿ ವಿಚಾರಣೆ ನಡೆಸಿ, ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

Join Whatsapp
Exit mobile version