Home ಟಾಪ್ ಸುದ್ದಿಗಳು ರಾಜ್ಯ ಸರಕಾರದ ‘ಕಾಲೇಜಿನಲ್ಲಿ ಕನ್ನಡ ಕಡ್ಡಾಯ’ ಆದೇಶಕ್ಕೆ ಹೈಕೋರ್ಟ್ ತಡೆ !

ರಾಜ್ಯ ಸರಕಾರದ ‘ಕಾಲೇಜಿನಲ್ಲಿ ಕನ್ನಡ ಕಡ್ಡಾಯ’ ಆದೇಶಕ್ಕೆ ಹೈಕೋರ್ಟ್ ತಡೆ !

ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿದ್ದ ಕಾಲೇಜು ಹಂತದಲ್ಲಿಯೂ ಕನ್ನಡ ಕಲಿಕೆ ಕಡ್ಡಾಯದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸರ್ಕಾರ ಹೊರಡಿಸಿದ್ದ ಎರಡು ಆದೇಶಗಳಿಗೆ ಹೈಕೋರ್ಟ್ ಇಂದು ತಡೆ ನೀಡಿದೆ. 2021ರ ಆಗಸ್ಟ್ 7 ಮತ್ತು ಸಪ್ಟೆಂಬರ್ 15ರಂದು ಸರಕಾರ ಆದೇಶ ಹೊರಡಿಸಿತ್ತು.

ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿತ್ತು. ಸರಕರದ ಆದೇಶಕ್ಕೆ ತದ್ವಿರುದ್ಧವಾಗಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾದೇಶಿಕ ಭಾಷೆ ಕಡ್ಡಾಯವಲ್ಲ ಎಂದು ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿತ್ತು..

Join Whatsapp
Exit mobile version