Home ಟಾಪ್ ಸುದ್ದಿಗಳು ಕೇಂದ್ರ ಸಚಿವರ ಕಟ್ಟಡ ಸಹಿತ ಮುಂಬೈಯ ಎಲ್ಲ ಅನಧಿಕೃತ ಕಟ್ಟಡ ಕೆಡವಲು ಹೈಕೋರ್ಟ್ ಆದೇಶ

ಕೇಂದ್ರ ಸಚಿವರ ಕಟ್ಟಡ ಸಹಿತ ಮುಂಬೈಯ ಎಲ್ಲ ಅನಧಿಕೃತ ಕಟ್ಟಡ ಕೆಡವಲು ಹೈಕೋರ್ಟ್ ಆದೇಶ

ಮುಂಬೈ: ಕೇಂದ್ರ ಮಂತ್ರಿ ನಾರಾಯಣ ರಾಣೆಯವರ ಬಂಗಲೆ ಸಹಿತ ಮುಂಬೈ ನಗರದ ಎಲ್ಲ ಅನಧಿಕೃತ ಕಟ್ಟಡಗಳನ್ನು ಹೊಡೆದುರುಳಿಸುವಂತೆ ಬಾಂಬೆ ಹೈ ಕೋರ್ಟ್ ಮಂಗಳವಾರ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಮತ್ತಿತರ ನಗರಾಡಳಿತಗಳಿಗೆ ಆದೇಶ ನೀಡಿದೆ.

ಜುಹುನಲ್ಲಿರುವ ಕೇಂದ್ರದ ಬಿಜೆಪಿ ಮಂತ್ರಿ ನಾರಾಯಣ ರಾಣೆಯವರ ಬಂಗಲೆ ಸಹಿತ ನಗರದ ಎಲ್ಲ ಅನಧಿಕೃತ ಕಟ್ಟಡಗಳನ್ನು ಉರುಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ನಗರಾಡಳಿತಗಳಿಗೆ ಸೂಚನೆ ನೀಡಿದೆ. ಎಫ್ ಎಸ್ ಐ- ಮಹಡಿ ತಳಗಳ ಸೂಚಿ ಮತ್ತು ಸಿಆರ್ ಝಡ್- ಕರಾವಳಿ ನಿಯಂತ್ರಣ ವಲಯ ಈ ಎರಡು ಕಾನೂನುಗಳನ್ನು ಯಾವ ಕಟ್ಟಡವೂ ಮೀರುವಂತಿಲ್ಲ ಎಂದು ಕೋರ್ಟು ತಾಕೀತು ಮಾಡಿದೆ.

ಹೈಕೋರ್ಟಿನ್ ಜಸ್ಟಿಸ್ ಗಳಾದ ಆರ್. ಡಿ. ಧನುಕ ಮತ್ತು ಕಮಲ್ ಖಾಟ ಅವರಿದ್ದ ವಿಭಾಗೀಯ ಪೀಠವು ಮುಂಬೈ ನಗರಾಡಳಿತಗಳಿಗೆ ಈ ಆದೇಶ ನೀಡಿತು. ಸಚಿವ ರಾಣೆ ಕುಟುಂಬವು ಇನ್ನೊಂದು ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು. ಸಂಪೂರ್ಣ ಅನಧಿಕೃತ ಕಟ್ಟಡವಾಗಿದ್ದು ಅದನ್ನು ಅಧಿಕೃತವಾಗಿಸಿಕೊಳ್ಳಲು ಎಷ್ಟೆಂದು ಅವಕಾಶ ನೀಡುತ್ತೀರಿ ಎಂದು ಕೋರ್ಟು ಪ್ರಶ್ನಿಸಿತು.

ಇನ್ನು ಎರಡು ವಾರದೊಳಗೆ ಅವರ ಕಟ್ಟಡದ ಅಕ್ರಮ ಭಾಗವನ್ನು ಒಡೆದು ಹಾಕಬೇಕು ಹಾಗೂ ಎಲ್ಲ ಅನಧಿಕೃತ ಕಟ್ಟಡಗಳು ಉಳಿಯದಂತೆ ನೋಡಿಕೊಳ್ಳಬೇಕು ಎಂದು ಪೌರಾಡಳಿತ ಸಂಸ್ಥೆಗೆ ಕೋರ್ಟ್ ಹೇಳಿತು. ಹಾಗೂ ಮುಂದಿನ ವಾರದಲ್ಲಿ ತನಗೆ ವರದಿ ಒಪ್ಪಿಸುವಂತೆಯೂ ತಿಳಿಸಿತು.

ಸಚಿವ ರಾಣೆಯವರ ಕಂಪೆನಿಗೆ ರೂ. 10 ಲಕ್ಷ ದಂಡ ವಿಧಿಸಿದ ಕೋರ್ಟ್, ಆ ಹಣವನ್ನು ಮಹಾರಾಷ್ಟ್ರ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಟ್ಟುವಂತೆಯೂ ಆದೇಶ ನೀಡಿತು.

ರಾಣೆಯವರ ವಕೀಲರಾದ ಶಾರ್ದುಲ್ ಸಿಂಗ್ ಅವರು ತೀರ್ಪಿಗೆ ಆರು ತಿಂಗಳು ಸಮಯಾವಕಾಶ ನೀಡಬೇಕು, ನಮ್ಮ ಕಕ್ಷಿದಾರರು ಸುಪ್ರೀಂ ಕೋರ್ಟಿಗೆ ಹೋಗಲು ಅನುಕೂಲ ಆಗುತ್ತದೆ ಎಂದರು. ಆದರೆ ಹೈ ಕೋರ್ಟ್ ಪೀಠವು ಅವರ ಮನವಿಯನ್ನು ಪುರಸ್ಕರಿಸಲಿಲ್ಲ.

ಅನಧಿಕೃತ ಎಂಬ ಪಾಲಿಕೆಯ ಮೊದಲ ತೀರ್ಮಾನವನ್ನು ರದ್ದು ಪಡಿಸಿ ಅಧಿಕೃತಕ್ಕೆ ಸಲ್ಲಿಸಿರುವ ಎರಡನೆಯ ಅರ್ಜಿಯನ್ನು ಸ್ವೀಕರಿಸಲು ಹೇಳಬೇಕು ಎಂದು ರಾಣೆ ಕುಟುಂಬದವರ ಕಾಲ್ಕಾ ರಿಯಲ್ ಎಸ್ಟೇಟ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟು ವಜಾ ಮಾಡಿತು.

Join Whatsapp
Exit mobile version