ನವದೆಹಲಿ: ಮರ್ಕಝ್ ನಿಝಾಮುದ್ದೀನ್’ನ ಕೀಲಿಕೈಗಳನ್ನು ತಬ್ಲೀಗ್ ಜಮಾಅತ್’ನ ಮುಖ್ಯಸ್ಥ ಮೌಲಾನಾ ಸಾದ್ ಅವರಿಗೆ ಹಸ್ತಾಂತರಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ 2020 ರ ಮಾರ್ಚ್ ನಲ್ಲಿ ಮುಚ್ಚಲಾಗಿದ್ದ ನಿಝಾಮುದ್ದೀನ್ ಮರ್ಕಝ್’ನ ಕೀಲಿಕೈಗಳನ್ನು ಜಮಾಅತ್ ನಾಯಕ ಮೌಲಾನಾ ಸಾದ್’ರಿಗೆ ಹಸ್ತಾಂತರಿಸಲು ತನ್ನ ಅಭ್ಯಂತರವಿಲ್ಲ ಎಂದು ನಗರ ಪೊಲೀಸರು ದೆಹಲಿ ಹೈಕೋರ್ಟ್’ಗೆ ತಿಳಿಸಿದ್ದರು. ಈ ಮನವಿಯನ್ನು ಗಮನಿಸಿದ ಹೈಕೋರ್ಟ್ ನಿಝಾಮುದ್ದೀನ್ ಮರ್ಕಝ್ ಅನ್ನು ಅನ್ಲಾಕ್ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.
ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ 2020ರ ಮಾರ್ಚ್ ನಲ್ಲಿ ಮುಚ್ಚಲಾಗಿದ್ದ ಮಸೀದಿ, ಮದರಸಾ ಕಾಶಿಫ್-ಉಲ್-ಉಲೂಮ್ ಮತ್ತು ಹಾಸ್ಟೆಲ್ ಒಳಗೊಂಡ ನಿಝಾಮುದ್ದೀನ್ ಮರ್ಕಝ್ ಅನ್ನು ಮತ್ತೆ ತೆರೆಯಲು ನಿರ್ದೇಶನ ನೀಡುವಂತೆ ಕೋರಿ ದೆಹಲಿ ವಕ್ಫ್ ಮಂಡಳಿ ಅರ್ಜಿ ಸಲ್ಲಿಸಿತ್ತು.