Home ಟಾಪ್ ಸುದ್ದಿಗಳು ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ ಸಿಎಂ ಸಿದ್ದರಾಮಯ್ಯಗೆ ಇನ್ನೂ ತಲುಪಿಲ್ಲವೇ: SDPI ಪ್ರಶ್ನೆ

ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ ಸಿಎಂ ಸಿದ್ದರಾಮಯ್ಯಗೆ ಇನ್ನೂ ತಲುಪಿಲ್ಲವೇ: SDPI ಪ್ರಶ್ನೆ

ಮಂಗಳೂರು: ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ ಸಿಎಂ ಸಿದ್ದರಾಮಯ್ಯಗೆ ಇನ್ನೂ ತಲುಪಿಲ್ಲವೇ ಎಂದು SDPI ಪ್ರಶ್ನಿಸಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ, ಬಜರಂಗಿಗಳ ಸುಳ್ಳು ದೂರಿನಂತೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಕೇಸು ದಾಖಲಿಸಿ ಜೈಲುಗಟ್ಟಿದ ಮತ್ತು ಕಾಟಿಪಳ್ಳದಲ್ಲಿ ಬಜರಂಗದಳದ ಗೂಂಡಾಗಳು ಮತ್ತು ಫಾಝಿಲ್ ಕೊಲೆ ಆರೋಪಿಗಳ ಜೊತೆ ಸೇರಿ ಮಾಂಸದಂಗಡಿಗೆ ದಾಳಿ ನಡೆಸಿದ ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ ಪೊಲೀಸ್ ಕಮಿಷನರ್ ಹಾಗೂ ಸಿಎಂ ಸಿದ್ದರಾಮಯ್ಯರವರಿಗೆ ಇನ್ನೂ ತಲುಪಿಲ್ಲವೇ ಎಂದು ಪ್ರಶ್ನಿಸಿದ್ದಾರೆ.


ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಟ್ವೀಟ್ ಮಾಡಿ, ಸುರತ್ಕಲ್ ಪೊಲೀಸರಿಗೂ ಬಜರಂಗಿಗಳಿಗೂ ಅದ್ಯಾವ ಜನುಮದ ಸಂಬಂಧ?ಈ ಠಾಣೆಯ ವ್ಯಾಪ್ತಿಯನ್ನು ನಿಯಂತ್ರಿಸುವ ಹೊರ ಗುತ್ತಿಗೆಯನ್ನು ಫಾಝಿಲ್ ಹಂತಕರನ್ನು ಒಳಗೊಂಡ ಭಜರಂಗಿ ಗೂಂಡಗಳಿಗೆ ಕಾಂಗ್ರೆಸ್ ಸರಕಾರ ನೀಡಿದೆಯೇ?ಅಥವ ಭಜರಂಗಿ ಗೂಂಡಾ ಪಡೆಯ ನೇತೃತ್ವದಲ್ಲಿ ಸರಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.


ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಮೂನಿಷ್ ಅಲಿ ಟ್ವೀಟ್ ಮಾಡಿ, ಸಂಘಪರಿವಾರದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಪ್ರೇರಣೆ ಎಂದು ಸುಳ್ಳಾರೋಪ ಹೊರಿಸಿ ಶಾರಿಕ್ ಬಂಧನ ಹಾಗೂ ಫಾಝಿಲ್ ಹಂತಕರೊಂದಿಗೆ ಸೇರಿ ಕಾಟಿಪಳ್ಳದ ಬೀಫ್ ಸ್ಟಾಲ್ ಗೆ ಅಕ್ರಮ ದಾಳಿ ಮತ್ತು ಬಂಧನ – ಈ ಎರಡು ಘಟನೆಗಳು ಸುರತ್ಕಲ್ ವ್ಯಾಪ್ತಿಯ ಪೊಲೀಸರನ್ನು ಇವರು ಪೊಲೀಸರೋ ಅಥವಾ ಭಜರಂಗದಳದವರೋ ಎಂದು ಸಂಶಯಿಸುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಯುವತಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಇಡ್ಯಾ ನಿವಾಸಿ ಶಾರಿಕ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು. ಈತ ಯುವತಿಯ ಫೇಸ್ ಬುಕ್ ಹ್ಯಾಕ್ ಮಾಡಿ ಆಕೆಯ ಅಣ್ಣ ಮತ್ತೂ ಆತನ ಸ್ನೇಹಿತನಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ರವಾನಿಸಿಸಿದ್ದ ಎನ್ನಲಾಗಿದ್ದು, ಈ ಸಂಬಂಧ ಯುವತಿ ಅ.22ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ಆಧರಿಸಿ ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿ ಅ.23ರಂದು ಕಳುಹಿಸಿದ್ದರು. ಆ ಬಳಿಕ ಮತ್ತೆ ಅದೇ ರೀತಿಯ ಸಂದೇಶಗಳು ಬರಲಾರಂಭಿಸಿದವು. ಇದರಿಂದ ಆತಂಕಕ್ಕೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದು, ಆಕೆ ಚೆತರಿಸಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿ ಶಾರಿಕ್ ನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.


ಇನ್ನೊಂದೆಡೆ, ಕಾಟಿಪಳ್ಳದ ಬೀಫ್ ಸ್ಟಾಲ್ ಗೆ ಬಜರಂಗದಳದ ಕಾರ್ಯಕರ್ತರು ತಡರಾತ್ರಿ ಅಕ್ರಮ ದಾಳಿ ನಡೆಸಿದ್ದರು.

Join Whatsapp
Exit mobile version