Home ಟಾಪ್ ಸುದ್ದಿಗಳು ‘ಹಲಾಲ್ ಮುಕ್ತ ದೀಪಾವಳಿ ಅಭಿಯಾನ’: ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಎಡಿಜಿಪಿ ಅಲೋಕ್...

‘ಹಲಾಲ್ ಮುಕ್ತ ದೀಪಾವಳಿ ಅಭಿಯಾನ’: ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ

ಹಾಸನ: ರಾಜ್ಯದ ಹಲವಡೆ ಸಂಘ ಪರಿವಾರದ ಕಾರ್ಯಕರ್ತರು ‘ಹಲಾಲ್ ಮುಕ್ತ ದೀಪಾವಳಿ’ ಎಂಬ ಹೊಸ ವಿವಾದಾತ್ಮಕ ಅಭಿಯಾನವನ್ನು ಹುಟ್ಟುಹಾಕಿದ್ದು ಹಿಂದುತ್ವವಾದದ ನೆಪದಲ್ಲಿ ಸಮಾಜದ ಸ್ವಾಸ್ಥ್ಯ ಕೆಡವಲು ಪ್ರಯತ್ನ ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದುತ್ವವಾದಿಗಳಿಗೆ ಎಚ್ಚರಿಕೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಅಲ್ಲಲ್ಲಿ ನಡೆಸುವ ಅಭಿಯಾನದ ನೆಪದಲ್ಲಿ ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನ್ ಮಾಡಿದ್ದಾರೆ.

ಹಾಸನಾಂಬೆ ದೇವತೆಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಕಾನೂನು ಇತಿಮಿತಿಯಲ್ಲಿ ಯಾರು ಪ್ರತಿಭಟನೆ ಮಾಡುತ್ತಾರೋ, ಅದಕ್ಕೆ ನಮ್ಮ ಕಡೆಯಿಂದ ವಿರೋಧವಿಲ್ಲ. ಆದರೆ ಕಾನೂನು ಮೀರಿ ಯಾರೇ ಆಗಲಿ, ಏನಾದರೂ ಮಾಡಿದರೆ, ಕಠಿಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಯಾರೇ ಆಗಲಿ ಹದ್ದು ಮೀರಿದರೆ ಅಂತವರನ್ನು ಹೆಡೆಮುರಿ ಕಟ್ಟಲು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇವೆ ಎಂದು ತಿಳಿಸಿದರು.

Join Whatsapp
Exit mobile version