Home ಟಾಪ್ ಸುದ್ದಿಗಳು ಗುರ್ಗಾಂವ್: ಇಬ್ಬರು ಮುಸ್ಲಿಮ್ ಯುವಕರಿಗೆ ಧಾರ್ಮಿಕ ನಿಂದನೆಗೈದು ಸಂಘಪರಿವಾರದ ಕಾರ್ಯಕರ್ತರಿಂದ ಗಂಭೀರ ಹಲ್ಲೆ

ಗುರ್ಗಾಂವ್: ಇಬ್ಬರು ಮುಸ್ಲಿಮ್ ಯುವಕರಿಗೆ ಧಾರ್ಮಿಕ ನಿಂದನೆಗೈದು ಸಂಘಪರಿವಾರದ ಕಾರ್ಯಕರ್ತರಿಂದ ಗಂಭೀರ ಹಲ್ಲೆ

ಗುರ್ಗಾಂವ್: ಸಂಘಪರಿವಾರದ ಕಾರ್ಯಕರ್ತರು ಧಾರ್ಮಿಕ ನಿಂದನೆ ಮಾಡಿ ಇಬ್ಬರು ಮುಸ್ಲಿಮ್ ಯುವಕರಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ.

ಬಿಹಾರ ಮೂಲದ ಅಬ್ದುಲ್ ರೆಹ್ಮಾನ್ ಮತ್ತು ಮುಹಮ್ಮದ್ ಅಝಮ್ ಎಂಬವರೆ ಗಂಭೀರವಾಗಿ ಹಲ್ಲೆಗೊಳಗಾದ ಯುವಕರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗುರ್ಗಾಂವ್ ನ ಸೆಕ್ಟರ್ 45 ರಲ್ಲಿ ಮದ್ರಸಾವೊಂದರ ದೇಣಿಗೆ ಸಂಗ್ರಹಿಸಿ ತಮ್ಮ ಬೈಕ್ ನಲ್ಲಿ ಚಕ್ಕರ್ ಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪರಿಚಿತರ ತಂಡವೊಂದು ಧರ್ಮ ನಿಂದನೆಗೈದು ತಮ್ಮ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಸಂತ್ರಸ್ತ ಮುಸ್ಲಿಮ್ ಯುವಕರು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

ಧರ್ಮದ ನಿಂದನೆಗೈದ ಹಲ್ಲೆಕೋರರು ತಮ್ಮ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಬಳಿಕ ನಮ್ಮಲ್ಲಿದ್ದ ಮೊಬೈಲ್ ಪೋನ್, ಬೈಕ್ ದೋಚಿದ್ದು, ನಮ್ಮ ಬಾಯಿಗೆ ಬಲವಂತವಾಗಿ ಬಿಳಿ ಬಣ್ಣದ ಹುಡಿಯನ್ನು ಹಾಕಿದ್ದಾರೆ ಎಂದು ಸಂತ್ರಸ್ತರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಸಂತ್ರಸ್ತ ಯುವಕರು ನೀಡಿದ್ದ ದೂರಿನನ್ವಯ ಹಲ್ಲೆಕೋರರ ವಿರುದ್ಧ ಐಪಿಸಿ ಸೆಕ್ಷನ್ 323, 379 ಬಿ, 295 ಎ, 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗುರ್ಗಾಂವ್ ನಗರ ಎಸಿಪಿ ಅಮನ್ ಯಾದವ್ ತಿಳಿಸಿದ್ದಾರೆ.

Join Whatsapp
Exit mobile version