Home ಟಾಪ್ ಸುದ್ದಿಗಳು ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಇಂದು ನಿರ್ಣಾಯಕ ತೀರ್ಪು ಪ್ರಕಟಿಸಲಿರುವ ಗುಜರಾತ್ ಹೈಕೋರ್ಟ್

ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಇಂದು ನಿರ್ಣಾಯಕ ತೀರ್ಪು ಪ್ರಕಟಿಸಲಿರುವ ಗುಜರಾತ್ ಹೈಕೋರ್ಟ್

ನವದೆಹಲಿ: ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಬಗೆಗಿನ ನಿರ್ಣಾಯಕ ತೀರ್ಪು ಇಂದು ಗುಜರಾತ್ ನ್ಯಾಯಾಲಯ ಪ್ರಕಟಿಸಲಿದೆ.


ಮಾನಹಾನಿ ಪ್ರಕರಣದ ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಹೈಕೋರ್ಟ್ ಮೊರೆ ಹೋಗಿದ್ದು, ತಡೆಯಾಜ್ಞೆ ಲಭಿಸಿದರೆ ರಾಹುಲ್ ಗಾಂಧಿ ಲೋಕಸಭಾ ಸಂಸದ ಹುದ್ದೆಯನ್ನು ಪುನಃ ವಹಿಸಲಿದ್ದಾರೆ.
ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಪ್ರಾಚಕ್ ಅವರು ಇಂದು ವಿಚಾರಣೆ ನಡೆಸಲಿದ್ದಾರೆ.


ಈ ಹಿಂದೆ ಹಿರಿಯ ವಕೀಲ ಪಂಕಜ್ ಚಂಪನೇರಿ ಅವರು ಸಲ್ಲಿಸಿದ್ದ ಮೇಲ್ಮನವಿ ನ್ಯಾಯಮೂರ್ತಿ ಗೀತಾ ಗೋಪಿ ನೇತೃತ್ವದ ನ್ಯಾಯಪೀಠಕ್ಕೆ ತಲುಪಿತ್ತು, ಆದರೆ ಗೀತಾ ಗೋಪಿ ಅವರು ಯಾವುದೇ ಸಕಾರಣ ನೀಡದೇ ಹಿಂಜರಿದಿದ್ದರು. ನಂತರ, ಮೇಲ್ಮನವಿ ಹೊಸ ನ್ಯಾಯಪೀಠದ ಮುಂದೆ ಬಂದಿದೆ.


ಶಿಕ್ಷೆಗೆ ತಡೆಯಾಜ್ಞೆ ಲಭಿಸದಿದ್ದರೆ ಚುನಾವಣಾ ಆಯೋಗವು ವಯನಾಡ್ ಕ್ಷೇತ್ರದ ಉಪಚುನಾವಣೆಯ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ನಿರೀಕ್ಷಿಸಲಾಗಿದೆ.

Join Whatsapp
Exit mobile version