Home ಟಾಪ್ ಸುದ್ದಿಗಳು ಗುಜರಾತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ 14 ಜನ ಮಹಿಳೆಯರು; ಕರ್ಣೀ ಸೇನಾ ನಾಯಕಿಗೆ ಟಿಕೆಟ್

ಗುಜರಾತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ 14 ಜನ ಮಹಿಳೆಯರು; ಕರ್ಣೀ ಸೇನಾ ನಾಯಕಿಗೆ ಟಿಕೆಟ್

ಅಹ್ಮದಾಬಾದ್: ಬಿಜೆಪಿಯು ಗುಜರಾತ್ ವಿಧಾನ ಸಭಾ ಚುನಾವಣೆಗೆ ಗುರುವಾರ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ 160 ಜನರಲ್ಲಿ ಬಿಜೆಪಿಯು 14 ಮಹಿಳೆಯರಿಗೆ ಟಿಕೆಟ್ ನೀಡಿದೆ.

1995ರಿಂದ ನಡೆದ ಆರು ವಿಧಾನಸಭಾ ಚುನಾವಣೆಗಳ್ಲಿಯೂ ಬಿಜೆಪಿಯು ಜಯ ಗಳಿಸಿದೆ. ಅದಕ್ಕೆ ಮೊದಲು ಅಲ್ಪ ಕಾಲ ಜನತಾ ಸರಕಾರ ಇತ್ತಾದರೂ ಕಾಂಗ್ರೆಸ್ ಭದ್ರಕೋಟೆ ಎಂದೇ ಗುಜರಾತನ್ನು ಕರೆಯಲಾಗುತ್ತಿತ್ತು.

2022ರ ಚುನಾವಣೆಗೆ ಸದ್ಯ 14 ಮಹಿಳೆಯರನ್ನು ಬಿಜೆಪಿ ಪ್ರಕಟಿಸಿದೆ. ಇನ್ನು ಅದು 22 ಕ್ಷೇತ್ರಗಳಿಗಷ್ಟೆ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ.

ಮಹಳೆಯರು ಟಿಕೆಟ್ ಪಡೆದ ಕ್ಷೇತ್ರಗಳ ಮತ್ತು ಅವರ ಹೆಸರು ಮುಂದಿನಂತಿದೆ.

ಗಾಂಧಿಗಾಮ್- ಮಾಲ್ತಿಬೆನ್ ಕಿಶೋರ್ ಭಾಯಿ ಮಹೇಶ್ವರಿ, ವಾದ್ವಾನ್- ಜಿಜ್ನಾಬೆನ್ ಸಂಜಯ್ ಭಾಯಿ ಪಾಂಡ್ಯಾ, ರಾಜ್ ಕೋಟ್ ಪಶ್ಚಿಮ- ದರ್ಶಿತ್ ಬೆನ್ ಪಾರಸ್ ಭಾಯಿ ಶಾ, ರಾಜ್ ಕೋಟ್ ಗ್ರಾಮೀಣ- ಭಾನುಬೆನ್ ಮನೋಹರಭಾಯಿ ಬಾಬ್ರಿಯಾ, ಗೊಂಡಾಲ್- ಗೀತಾಬಾ ಜಯರಾಜ್ ಸಿಂಗ್ ಜಡೇಜಾ, ಜಾಂನಗರ ಉತ್ತರ- ರಿವಾಬಾ ರಬೀಂದ್ರಸಿಂಗ್ ಜಡೇಜಾ, ನಾಡೋಂದ್- ದರ್ಶನಬೆನ್ ದೇಶ್ಮುಖ್ ವಾಸವ, ಲಿಂಬಾಯತ್- ಸಂಗೀತಬೆನ್ ಪಾಟೀಲ್, ನರೋದ- ಪಾಯಲ್ ಬೆನ್ ಮನೋಜ್ ಭಾಯಿ ಕುಕ್ರಾಯಿ, ಥಕ್ಕರ್ ಬಾಪ್ಪಾ ನಗರ- ಕಾಂಚನಬೆನ್ ವಿನಿಭಾಯಿ ರಾಧಿಯ, ಮೋರ್ವಾಹದ್- ನಿಮಿಶಾಬೆನ್ ಮನ್ಹರ್ ಭಾಯಿ ದಿಂಡರ್, ವಡೋದರ- ಮನಿಶಾಬೆನ್ ರಾಜೀವ್ ಭಾಯಿ ಲೋವೆರ್, ಬೈದ್- ಬಿಕಿಬೆನ್ ಗರ್ವಂತ್ ಸಿಂಗ್, ಅಸರ್ವಾ- ದರ್ಶನಾಬೆನ್ ವಘೇಲಾ.

ಇವರಲ್ಲಿ ರಿವಾಬಾ ಕ್ರಿಕೆಟರ್ ರವೀಂದ್ರ ಜಡೇಜಾರ ಪತ್ನಿ. ರಿವಾಬಾ ಮೂಲ ರಾಜ್ ಕೋಟ್, ಅಲ್ಲಿ ಅವರ ತಂದೆ ಉದ್ಯಮಿ. ಆದರೆ ಜಾಮ್ ನಗರ ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಮೆಕಾನಿಕಲ್ ಎಂಜಿನಿಯರ್ ಆದ ಅವರು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. 2016ರಲ್ಲಿ ಜಡೇಜಾರನ್ನು ಮದುವೆಯಾದ ಅವರು ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದರು. ರಿವಾಬಾರು ರಜಪೂತರ ಕರ್ಣೀ ಸೇನಾದ ನಾಯಕಿ.

Join Whatsapp
Exit mobile version