ಉಳ್ಳಾಲ ನ.10: ಕಿನ್ಯಾ ಗ್ರಾಮ ಪಂಚಾಯತ್ ಕಛೇರಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಇಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಭೇಟಿ ನೀಡಿ ರೋಗ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಿನ್ಯ ಗ್ರಾಮ ಪಂಚಾಯತ್ PDO ವಿಶ್ವನಾಥ್ ರವರು ಅಧಿಕಾರಿಗಳನ್ನು ಬರಮಾಡಿಕೊಂಡರು. ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಅವರ ಕೋರಿಕೆ ಮೇರೆಗೆ ಕಿನ್ಯಾ ಗ್ರಾಮದ ಟಿಬಿ ರೋಗಿಗಳಿಗೆ ಮಾಸಿಕ ಪೌಷ್ಟಿಕಾಂಶಗಳ ಕಿಟ್ ಗಳನ್ನು ಗೋಲ್ಡನ್ ಹೆಲ್ತ್ ಪೌಂಡೇಶನ್ ಅಧ್ಯಕ್ಷರಾದ ಮೂಸಾ ಅಬ್ಬಾಸ್ ಹಾಜಿ ಕಿನ್ಯ ವಿತರಣೆ ಮಾಡುವ ಬಗ್ಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಕ್ ಕಿನ್ಯ, ಸಂಪನ್ಮೂಲ ವ್ಯಕ್ತಿ ಅಬೂಸಾಲಿ ಹಾಜಿ,ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಮದ್, ಹಾರಿಸ್ ಕುತುಬಿನಗರ, ಜಿಲ್ಲಾ ಕ್ಷಯ ರೋಗ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿ ಶಾಲಿನಿ, ಪಂಚಾಯತ್ ಸಿಬ್ಬಂದಿ ಅಶ್ರಫ್ ಮತ್ತಿತರು ಉಪಸ್ಥಿತರಿದ್ದರು.