Home ಟಾಪ್ ಸುದ್ದಿಗಳು ಗುಜರಾತ್ ಸೇತುವೆ ದುರಂತ: ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಅಮಾನತು

ಗುಜರಾತ್ ಸೇತುವೆ ದುರಂತ: ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಅಮಾನತು

ಅಹಮದಾಬಾದ್: ಅಕ್ಟೋಬರ್ 30ರಂದು ಮಚ್ಚು ನದಿಯ ತೂಗು ಸೇತುವೆ ಕುಸಿದು 135 ಜನರನ್ನು ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಮೊರ್ಬಿ ಪುರಸಭೆ ಮುಖ್ಯ ಅಧಿಕಾರಿ ಸಂದೀಪ್ ಸಿನ್ಹ್ ಝಾಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ನ್ಯಾಯಯುತ, ನಿಷ್ಪಕ್ಷಪಾತ ತನಿಖೆಯನ್ನು ನಡೆಸುವಂತಾಗಲು ಮುಖ್ಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಸರ್ಕಾರ ನೇಮಿಸಿದ ಐದು ಸದಸ್ಯರ ವಿಶೇಷ ಸಮಿತಿಯು ಖಾಸಗಿ ಕಂಪೆನಿ ಒರೆವಾ, ಸೇತುವೆಯ ದುರಸ್ಥಿಯಲ್ಲಿ ತೊಡಗಿರುವ ಗುತ್ತಿಗೆದಾರರು ಮತ್ತು ದುರಂತದಲ್ಲಿ ಪುರಸಭೆಯ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸುತ್ತಿದೆ.

ಮೊರ್ಬಿ ಪುರಸಭೆಯು ಒರೆವಾ ಕಂಪೆನಿಯೊಂದಿಗೆ 15 ವರ್ಷಗಳ ಕಾಲ, ಪುರಸಭೆಯ ಸಾಮಾನ್ಯ ಮಂಡಳಿಯ ಒಪ್ಪಿಗೆಯನ್ನು ಪಡೆಯದೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಗಳು ತಿಳಿಸಿವೆ.

Join Whatsapp
Exit mobile version