Home ಟಾಪ್ ಸುದ್ದಿಗಳು ಗುಜರಾತ್ ಸೇತುವೆ ದುರಂತ: ಮುಖ್ಯಮಂತ್ರಿ ರಾಜೀನಾಮೆ ನೀಡಿ, ತಕ್ಷಣ ಚುನಾವಣೆಗೆ ಹೋಗಲಿ; ಅರವಿಂದ್ ಕೇಜ್ರಿವಾಲ್

ಗುಜರಾತ್ ಸೇತುವೆ ದುರಂತ: ಮುಖ್ಯಮಂತ್ರಿ ರಾಜೀನಾಮೆ ನೀಡಿ, ತಕ್ಷಣ ಚುನಾವಣೆಗೆ ಹೋಗಲಿ; ಅರವಿಂದ್ ಕೇಜ್ರಿವಾಲ್

ನವದೆಹಲಿ: 141 ಜನರ ಸಾವಿಗೆ ಕಾರಣವಾದ ಗುಜರಾತ್’ನ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಘಟನೆಯ ನೈತಿಕ ಹೊಣೆಹೊತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ರಾಜ್ಯದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆಯನ್ನು ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಸಲು ವೇಳಾಪಟ್ಟಿ ಸಿದ್ಧವಾಗಿದ್ದು, ಈ ಚುನಾವಣೆಯಲ್ಲಿ ಕಿಂಗ್’ಮೇಕರ್ ಆಗಿ ಹೊರಹೊಮ್ಮಲು ಸತತ ಪ್ರಯತ್ನಿಸುತ್ತಿರುವ ಕೇಜ್ರಿವಾಲ್, ಸೇತುವೆ ದುರಂತವು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.

ಗಡಿಯಾರಗಳನ್ನು ತಯಾರಿಸುವ ಕಂಪೆನಿಗೆ ಸೇತುವೆಯ ಟೆಂಡರ್ ಅನ್ನು ಯಾಕೆ ನೀಡಲಾಯಿತು ಎಂದು ಪ್ರಶ್ನಿಸಿದ ಕೇಜ್ರಿವಾಲ್, ಇದರರ್ಥ ಆ ಕಂಪೆನಿಯವರು ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವುದು ಸ್ಪಷ್ಟ ಎಂದು ತಿಳಿಸಿದರು. ಸದ್ಯ ದಾಖಲಾಗಿರುವ ಪ್ರಕರಣದಲ್ಲಿ ಕಂಪೆನಿ ಅಥವಾ ಅದರ ಮಾಲಕರ ಕುರಿತು ಉಲ್ಲೇಖಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version