Home ಟಾಪ್ ಸುದ್ದಿಗಳು ಗುಬ್ಬಿ ಜೆಡಿಎಸ್ ಸಮಾವೇಶದಲ್ಲಿ ಜನಸಾಗರ; ಶ್ರೀನಿವಾಸ್‌ಗೆ ಸಡ್ಡು

ಗುಬ್ಬಿ ಜೆಡಿಎಸ್ ಸಮಾವೇಶದಲ್ಲಿ ಜನಸಾಗರ; ಶ್ರೀನಿವಾಸ್‌ಗೆ ಸಡ್ಡು

ತುಮಕೂರು: ಗುಬ್ಬಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಸಮಾವೇಶಕ್ಕೆ ಜನಸಾಗರವೇ ಸೇರಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಪರ್ಯಾಯ ನಾಯಕನನ್ನು ಜೆಡಿಎಸ್ ವರಿಷ್ಠರು ಹುಟ್ಟುಹಾಕಿದ್ದು, ಇದರ ಪ್ರಾರಂಭಿಕ ಹಂತವಾಗಿ ಜನಸಾಗರದ ಈ ಸಮಾರಂಭ ಎನ್ನಲಾಗಿದೆ.

ಸಮಾವೇಶಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಬಹುಸಂಖ್ಯೆಯ ಜನರು ಸೇರಿದ್ದರು‌. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಒಡನಾಟ ಇಟ್ಟುಕೊಂಡಿರುವುದಕ್ಕೆ ಕೆಂಡಾಮಂಡಲವಾಗಿರುವ ದಳಪತಿಗಳು ಶಾಸಕ ಸ್ಥಾನ ಮುಗಿಯುವ ಮೊದಲೇ ಎಸ್.ಆರ್.ಶ್ರೀನಿವಾಸ್ ಹಾಗೂ ಬೆಮೆಲ್ ಕಾಂತರಾಜು ಅವರನ್ನು ದೂರವಿಟ್ಟು ಇವತ್ತಿ‌ನ ಬೃಹತ್ ಸಮಾವೇಶ ಆಯೋಜಿಸಿದ್ದಾರೆ.

ಗುಬ್ಬಿ ಜೆಡಿಎಸ್ ಸಮಾವೇಶಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ಚನ್ನಬಸವೇಶ್ವರ ದೇವಾಲಯ ಆವರಣದಿಂದ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. 500 ಕೆಜಿ ಸೇಬಿನ ಹಾರ ಹಾಗೂ ಪುಷ್ಪಾಗಳನ್ನು ಹಾಕುವ ಮೂಲಕ ಕುಮಾರಸ್ವಾಮಿಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ. ಜನಸಾಗರದೊಂದಿಗೆ ಗುಬ್ಬಿ ಸಮಾವೇಶ ನಡೆಯುತ್ತಿದೆ.

Join Whatsapp
Exit mobile version