Home ಟಾಪ್ ಸುದ್ದಿಗಳು  ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ಮಾಲೀಕನಿಗೆ ಥಳಿತ; ಇಬ್ಬರು ಆರೋಪಿಗಳ ಬಂಧನ

 ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ಮಾಲೀಕನಿಗೆ ಥಳಿತ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯಿರುವ ದುಬೈ ಮಾರ್ಕೆಟ್​ನಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿದ ಯುವಕರ ಗುಂಪೊಂದು ಅಂಗಡಿ ಮಾಲೀಕನಿಗೆ ತಳಿಸಿದ ಘಟನೆ ನಡೆದಿದೆ.

 ಗ್ರಾಹಕನೋರ್ವ ಪವರ್ ಬ್ಯಾಂಕ್ ರಿಪೇರಿಗೆಂದು ಅಂಗಡಿಗೆ ಬಂದಿದ್ದ. ಅಂಗಡಿ ಮಾಲೀಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುವುದಿಲ್ಲ ಎಂದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಬಂದಿದ್ದ ಯುವಕ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಯುವಕ ಮಾಲೀಕನಿಗೆ ಥಳಿಸಿ, ಅಲ್ಲಿಂದ ತೆರಳಿದ್ದಾನೆ. ಇದಾದ ಬಳಿಕ ತನ್ನ ಗೆಳೆಯರ ಗುಂಪನ್ನು ಕರೆದುಕೊಂಡು ಬಂದು, ಮತ್ತೆ ಹಲ್ಲೆ ಮಾಡಿದ್ದಾನೆ. ಸುಮಾರು ಆರು ಜನರ ತಂಡದಿಂದ ಕೃತ್ಯ ಎಸಗಲಾಗಿದ್ದು, ಹಲ್ಲೆ ನಡೆಸಿದ ದೃಶ್ಯ, ಅಂಗಡಿಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version