Home ಕರಾವಳಿ ಮಂಗಳೂರು | ಇಳಂತಿಲ ಗ್ರಾಮದಲ್ಲಿ ಐದು ಗ್ರೇನೆಡ್ ಸ್ಫೋಟಕ ಪತ್ತೆ

ಮಂಗಳೂರು | ಇಳಂತಿಲ ಗ್ರಾಮದಲ್ಲಿ ಐದು ಗ್ರೇನೆಡ್ ಸ್ಫೋಟಕ ಪತ್ತೆ

ಮಂಗಳೂರು: ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದಲ್ಲಿ ಐದು ಗ್ರೇನೆಡ್ ರೀತಿಯ ಸ್ಫೋಟಕಗಳು ಪತ್ತೆಯಾಗಿವೆ.ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮ ನಿವಾಸಿ ನಿವೃತ್ತ ಯೋಧರಾಗಿರುವ ಜಯಕುಮಾರ್ ಪೂಜಾರಿಯವರ ಮನೆಯ ರಸ್ತೆ ಪಕ್ಕದಲ್ಲೇ ಗ್ರೆನೇಡ್ ಪತ್ತೆಯಾಗಿದೆ. ಈ ಬಗ್ಗೆ ಜಯಕುಮಾರ್ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಉಪ್ಪಿನಂಗಡಿಯಿಂದ ಶನಿವಾರ ಸಂಜೆಯ ವೇಳೆ ತನ್ನ ಮನೆಗೆ ಮರಳುತ್ತಿದ್ದ ಜಯಕುಮಾರ್ ಪೂಜಾರಿ ದಾರಿಮಧ್ಯೆ ಎಡಭಾಗದಲ್ಲಿರುವ ಇಳಿಜಾರಿನ ತಂತಿ ಬೇಲಿಯಲ್ಲಿ ಐದು ಗ್ರೆನೇಡ್ ಪತ್ತೆಯಾಗಿದೆ. ಬಳಿಕ ಗ್ರೆನೇಡ್ ಅನ್ನು ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಜಯಕುಮಾರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Join Whatsapp
Exit mobile version