Home ಟಾಪ್ ಸುದ್ದಿಗಳು ಹಾವೇರಿ ಕೇಸ್ | ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಗೃಹ ಸಚಿವ ಪರಮೇಶ್ವರ್

ಹಾವೇರಿ ಕೇಸ್ | ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಹಾವೇರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಕೆಲವರ ಬಂಧನವಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಕೇಸ್ ತನಿಖೆ ನಡೆಯುತ್ತಿದೆ. ಮೊದಲು ಆಕೆ ಗ್ಯಾಂಗ್ ರೇಪ್ ಎಂದು ದೂರು ಕೊಟ್ಟಿರಲಿಲ್ಲ. ನಂತರ ಆಕೆ ರೇಪ್ ಎಂದು ದೂರು ಕೊಟ್ಟಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಹಲವರ ಬಂಧನ ಅಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ

Join Whatsapp
Exit mobile version