Home ಟಾಪ್ ಸುದ್ದಿಗಳು ಮಣಿಪುರದ ತೌಬಾಲ್ ನಿಂದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭ: ಕಾಂಗ್ರೆಸ್

ಮಣಿಪುರದ ತೌಬಾಲ್ ನಿಂದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭ: ಕಾಂಗ್ರೆಸ್

ಇಂಫಾಲ್: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಜನವರಿ 14ರಂದು ಮಣಿಪುರದ ತೌಬಾಲ್ ಜಿಲ್ಲೆಯ ಖಾಸಗಿ ಮೈದಾನದಿಂದ ಆರಂಭವಾಗಲಿದೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.


ಇಂಫಾಲ್ ನ ಅರಮನೆ ಮೈದಾನದಿಂದ ಯಾತ್ರೆಗೆ ಚಾಲನೆ ನೀಡಲು ಅನುಮತಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವು ಮಣಿಪುರ ಸರ್ಕಾರಕ್ಕೆ ಕಳೆದ ವಾರ ಮನವಿ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿದ್ದು, ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸುವಂತೆ ಒತ್ತಾಯಿಸಿದೆ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೈಶಂ ಮೇಘಚಂದ್ರ ಸಿಂಗ್ ತಿಳಿಸಿದ್ದಾರೆ.
ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದ ಇಂಫಾಲ್ ನಿಂದ ಮುಂಬೈವರೆಗಿನ ಈ ಯಾತ್ರೆಯು 66 ದಿನ ನಡೆಯಲಿದೆ.

Join Whatsapp
Exit mobile version