Home ಟಾಪ್ ಸುದ್ದಿಗಳು ‘ಟೈಗರ್ ಕಾರ್ಯಚರಣೆ’ ಖಂಡನೀಯ, ಜೀವನೋಪಾಯಗಳನ್ನು ಗಳಿಸುವ ವ್ಯಪಾರಸ್ಥರ ಹಕ್ಕನ್ನು ಸರಕಾರ ಸಂರಕ್ಷಿಸಲಿ: SDTU

‘ಟೈಗರ್ ಕಾರ್ಯಚರಣೆ’ ಖಂಡನೀಯ, ಜೀವನೋಪಾಯಗಳನ್ನು ಗಳಿಸುವ ವ್ಯಪಾರಸ್ಥರ ಹಕ್ಕನ್ನು ಸರಕಾರ ಸಂರಕ್ಷಿಸಲಿ: SDTU

ಮಂಗಳೂರು: ಕಳೆದ ಎರಡು ದಿನಗಳಿಂದ ಮಂಗಳೂರಿನ ವಿವಿಧ ಕಡೆ ಬೀದಿ ಬದಿ ವ್ಯಪಾರಸ್ಥರ ಬಲವಂತದ ತೆರವು (ಟೈಗರ್) ಕಾರ್ಯಚರಣೆ ನಡೆಸಿದ ಪಾಲಿಕೆಯ ಈ ದಬ್ಬಾಳಿಕೆಯನ್ನು ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ದಕ್ಷಿಣ ಸಮಿತಿ ಅಧ್ಯಕ್ಷ ಇಕ್ಬಾಲ್ ಬೂಟ್ ಪ್ಯಾಲೇಸ್ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮದೇ ಆದ ಸಂಪನ್ಮೂಲಗಳನ್ನು ನೀಡುತ್ತಾ ಬಂದಿರುವ, ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ಬೀದಿ ಬದಿಯಲ್ಲಿ ವ್ಯಪಾರ ನಡೆಸುವ ಬೀದಿ ಬದಿ ವ್ಯಪಾರಸ್ಥರನ್ನು ಬಲವಂತದಿಂದ ತೆರವುಗೊಳಿಸಿ ಅವರ ಸ್ವತ್ತುಗಳನ್ನು ನಾಶಪಡಿಸುವ ಪಾಲಿಕೆಯ ಈ ದಬ್ಬಾಳಿಕೆ ಬಡ ಮಧ್ಯಮ ವರ್ಗದ ಹಸಿವು ನೀಗಿಸುವ ಸ್ವಾಭಿಮಾನದ ವ್ಯಾಪಾರವನ್ನು ಕಸಿಯುವ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಬೀದಿ ಬದಿ ವ್ಯಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ವ್ಯಪಾರ ನಿಯಂತ್ರಣ) 2014 ರ ಮಸೂದೆಗೆ ಅನುಗುಣವಾಗಿ ಅಧಿಕೃತ ಪಟ್ಟಣ ಮಾರಾಟ ಸಮಿತಿಯೊಂದಿಗೆ ಸಭೆ ನಡೆಸಿ ಚರ್ಚಿಸಿ ನಿಯಮನಸಾರ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಬಲವಂತದ ತೆರವು ಕಾರ್ಯಾಚರಣೆ ಪಾಲಿಕೆಯಿಂದ ಬಡ ಮಧ್ಯಮ ವರ್ಗದ ಹೊಟ್ಟೆಗೆ ಹೊಡೆಯವ ಹಿನಾಯ ಕೃತ್ಯವಾಗಿದೆ ನಗರದಲ್ಲಿ ಬಲಾಡ್ಯರು ಕಟ್ಟಿದ ಹಾಗೂ ಇನ್ನೂ ನಿರ್ಮಾಣವಾಗುವ ಕಟ್ಟಡ ನಿಯಮ ನಿರ್ಬಂಧಗಳನ್ನು ಮೀರಿದರೂ ಪಾಲಿಕೆಗೆ ಮಾತ್ರ ನಿಯಂತ್ರಿಸಲು ಸಾಧ್ಯವಾಗದೇ ಇರುವುದನ್ನು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ ಆದ್ದರಿಂದ ಪಾಲಿಕೆಯ ಈ ದಬ್ಬಾಳಿಕೆಗೆ ರಾಜ್ಯ ಸರಕಾರ ಮದ್ಯ ಪ್ರವೇಶಿಸಿ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆಗೆ ಆದ್ಯತೆ ನೀಡಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಬೀದಿ ವ್ಯಾಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) 2014 ಮಸೂದೆಗೆ ಅನುಗುಣವಾಗಿ ಮಂಗಳೂರು ಮಹಾನಗರ ಪಾಲಿಕೆ ನಡೆದುಕೊಂಡಿದೆಯೇ ಅಥವಾ ಟೈಗರ್ ಕಾರ್ಯಚರಣೆ ಮೂಲಕ ಗುಬ್ಬಿ ಮೇಲೆ ಗದಪ್ರಹಾರ ನಡೆಸಿ ಪೌರುಷ ತೋರಿಸಲಾಗಿದೆಯೇ ಎಂದು SDTU ಕರ್ನಾಟಕ ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಪ್ರಶ್ನಿಸಿದ್ದಾರೆ‌.

ಈ ಬಗ್ಗೆ ಅವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬೇಕಾದಷ್ಟು ಸಮಸ್ಯೆಗಳಿದ್ದರೂ ಬಡ ವ್ಯಾಪಾರಿಗಳ ಮೇಲೆ ಮನಪಾ ಗಳಿಗೆ ಏಕೆ ಕೆಂಗಣ್ಣು? ಈ ದಬ್ಬಾಳಿಕೆಗೆ ಕೊನೆ ಇಲ್ಲವೇ ಎಂದು ಕೇಳಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಮೇಲೆ ಮನಪಾ ದಿಂದ ಟೈಗರ್ ಕಾರ್ಯಚರಣೆಯನ್ನು ವಿರೋಧಿಸಿದ ಪ್ರತಿಭಾಟನಾಕಾರರಾದ ಓರ್ವ ಮಹಿಳೆ ಮತ್ತು ಬಿಕೆ ಇಮ್ತಿಯಾಜ್ ಮುಸ್ತಫಾರವರನ್ನು ಬಂಧಿಸಿದ ಕ್ರಮ ಖಂಡನೀಯ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆಯನ್ನು ಸಂರಕ್ಷಿಸಲು ಸಾಧ್ಯವಾಗದ ಶಾಸಕ, ಸಚಿವರು ಮತ್ತು ಸರಕಾರಕ್ಕೆ ದಿಕ್ಕಾರವಿರಲಿ ಸಂಸದರು, ಶಾಸಕ, ಸಚಿವರು, ಮತ್ತು ಸರಕಾರಕ್ಕೆ ದಿಕ್ಕಾರವಿರಲಿ ಎಂದು ಹೇಳಿದ್ದಾರೆ.

Join Whatsapp
Exit mobile version