ಬಂಟ್ವಾಳ: ಅಡಿಕೆ ಮಾರಿ ಸರ್ಕಾರಿ ಶಾಲೆಯೊಂದು ಬಸ್ ಖರೀದಿಸಿ ಗಮನ ಸೆಳೆದಿದೆ.
ಸುಮಾರು 628 ಅಡಿಕೆ ಮರಗಳು ನೀಡಿದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಬಂಟ್ವಾಳ ತಾಲೂಕಿನ ಮಿತ್ತೂರಿನ ಸರ್ಕಾರಿ ಶಾಲೆ ಬಸ್ ಖರೀದಿ ಮಾಡಿದೆ.
ತನ್ನ ಕೈತೋಟದ ಮೂಲಕ ಈಗಾಗಲೇ ಪ್ರಸಿದ್ಧಿ ಪಡೆದಿರುವ ಶಾಲೆ ಬಸ್ ಖರೀದಿಸುವ ಮೂಲಕ ಗಮನ ಸೆಳೆದಿದೆ.
ಸುಮಾರು 118 ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದುವರೆಗೆ ಆಟೋಗಳಲ್ಲಿ ಬರುತ್ತಿದ್ದರು. ಇನ್ನು, ಬಸ್ ನಲ್ಲಿ ಎರಡು ಟ್ರಿಪ್ ಗಳನ್ನು ಮಾಡುವ ಮೂಲಕ ಬರಲು ಸಾಧ್ಯ. ಇದರ ಖರ್ಚುವೆಚ್ಚವನ್ನು ಪೋಷಕರು ಸಮಾನವಾಗಿ ಭರಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸರೋಜಾ ಎ. ತಿಳಿಸಿದ್ದಾರೆ.