ದೆಹಲಿ: ರಾಜಕೀಯಕ್ಕೆ ಸೇರಲು ಐಎಎಸ್ ಹುದ್ದೆ ತೊರೆದಿದ್ದ ಜಮ್ಮು ಮತ್ತು ಕಾಶ್ಮೀರ ಕೇಡರ್ ನ ಐಎಎಸ್ ಅಧಿಕಾರಿ ಶಾ ಫೈಸಲ್ ಅವರಿಗೆ ಕೇಂದ್ರ ಸರ್ಕಾರ ಮತ್ತೆ ಸೇವೆಗೆ ಮರಳಲು ಅವಕಾಶ ನೀಡಿದೆ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಜಮ್ಮು ಮತ್ತು ಕಾಶ್ಮೀರದ ಮೊದಲ ಯುವಕ ಎಂಬ ಕೀರ್ತಿಗೆ ಭಾಜನರಾಗಿದ್ದ ಫೈಜಲ್ 2018ರಲ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‍ಮೆಂಟ್ (ಜೆಕೆಪಿಎಂ) ಎಂಬ ಪಕ್ಷ ಹುಟ್ಟುಹಾಕಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ಒಂದು ದಿನ ಮೊದಲು, ಅಂದರೆ ಆಗಸ್ಟ್ 4, 2019ರಲ್ಲಿ ಫೈಜಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಇದೀಗ ಫೈಜಲ್ ಅವರಿಗೆ ಸರ್ಕಾರಿ ಸೇವೆ ಮರಳಲು ಅವಕಾಶ ನೀಡಲಾಗಿದೆ.