ಸಾರಿಗೆ ನಿಗಮದ ನಿವೃತ್ತ ನೌಕರರಿಗೆ ವೇತನ ಪರಿಷ್ಕರಿಸಿ ಸರ್ಕಾರ ಆದೇಶ

Prasthutha|

ಬೆಂಗಳೂರು: ಸಾರಿಗೆ ನಿಗಮಗಳ ನಿವೃತ್ತಿಯಾಗಿರುವ ನೌಕರರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಕಾರ್ಮಿಕ ಸಂಘಟನೆಗಳ ಮನವಿಯ ಬೆನ್ನಲ್ಲೇ, ನಿವೃತ್ತಿಯಾದ ನೌಕರರಿಗೂ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಪರಿಣಾಮವಾಗಿ 2023ರ ಮಾರ್ಚ್ ನಲ್ಲಿ ನಿವೃತ್ತಿಯಾದ ನೌಕರರಿಗೆ ಶೇ 15 ರಷ್ಟು ಹೆಚ್ಚುವರಿ ವೇತನ ಸಿಗಲಿದೆ.

- Advertisement -


2023 ರ ಮಾರ್ಚ್ ನಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 2019 ರ ಡಿಸೆಂಬರ್ 31 ರಂದು ಅವರು ಪಡೆಯುತ್ತಿದ್ದ ಮೂಲವೇತನವನ್ನು ಪರಿಗಣಿಸಿ ಶೇ 15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿ ಪರಿಷ್ಕರಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version