Home ಟಾಪ್ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ದೇಶದ್ರೋಹಿ ಚಟುವಟಿಕೆಗಳ ಮಾಹಿತಿ ನೀಡುವ ಸೈಬರ್ ಕಾರ್ಯಕರ್ತರ ನಿಯೋಜನೆಗೆ ಸರಕಾರದ ಚಿಂತನೆ

ಸೋಶಿಯಲ್ ಮೀಡಿಯಾದಲ್ಲಿ ದೇಶದ್ರೋಹಿ ಚಟುವಟಿಕೆಗಳ ಮಾಹಿತಿ ನೀಡುವ ಸೈಬರ್ ಕಾರ್ಯಕರ್ತರ ನಿಯೋಜನೆಗೆ ಸರಕಾರದ ಚಿಂತನೆ

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು, ಭಯೋತ್ಪಾದನೆ, ತೀವ್ರವಾದ, ಅತ್ಯಾಚಾರ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುವವರನ್ನು ಗುರುತಿಸಿ ಸರಕಾರಕ್ಕೆ ಮಾಹಿತಿ ನೀಡುವ ಸೈಬರ್ ಕಾರ್ಯಕರ್ತರನ್ನು ನಿಯೋಜಿಸುವ ಯೋಜನೆಯೊಂದನ್ನು ಆರಂಭಿಸಲು ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಂ ಸೆಲ್ ಕ್ರಮ ಕೈಗೊಂಡಿದೆ.

ಈ ಯೋಜನೆಯನ್ನು ಆರಂಭಿಕವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ತ್ರಿಪುರಾದಲ್ಲಿ ಪ್ರಾಯೋಗಿಕವಾಗಿ ತರಲು ಚಿಂತಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಲಭಿಸುವ ಪ್ರಕ್ರಿಯೆಯನ್ನು ಆಧರಿಸಿ ಅದನ್ನು ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಂಯೋಜನಾ ಕೇಂದ್ರ ಈ ಯೋಜನೆಯಡಿ ನೋಡಲ್ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ಸೈಬರ್ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಲು ಇಷ್ಟವಿರುವವರು ಸ್ವಯಂ ಪ್ರೇರಣೆಯಿಂದ, ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Join Whatsapp
Exit mobile version