Home ಟಾಪ್ ಸುದ್ದಿಗಳು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ದಾಂಧಲೆಗೆ ಕುಮ್ಮಕ್ಕು ನೀಡಿದ್ದ ಆರೋಪಿ ಬಿಜೆಪಿ ಕಾರ್ಯಕರ್ತ, ನಟ ದೀಪ್...

ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ದಾಂಧಲೆಗೆ ಕುಮ್ಮಕ್ಕು ನೀಡಿದ್ದ ಆರೋಪಿ ಬಿಜೆಪಿ ಕಾರ್ಯಕರ್ತ, ನಟ ದೀಪ್ ಸಿಧು ಬಂಧನ

ನವದೆಹಲಿ : ಜನವರಿ 26 ರಂದು ದೆಹಲಿಯ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ದಾಂಧಲೆಗೆ ಕುಮ್ಮಕ್ಕು ನೀಡಿದ್ದ ಆರೋಪ ಎದುರಿಸುತ್ತಿರುವ ಬಿಜೆಪಿ ಕಾರ್ಯಕರ್ತ, ನಟ ದೀಪ್ ಸಿಧುನನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರೈತರ ಹೋರಾಟ ಪ್ರಯುಕ್ತ ಟ್ರಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದ ವೇಳೆ, ದೀಪ್ ಸಿಧು ಕುಮ್ಮಕ್ಕಿನಿಂದ ಒಂದು ಗುಂಪು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಮತ್ತು ರೈತ ಧ್ವಜ ಹಾರಿಸಿ ದಾಂಧಲೆ ನಡೆಸಿತ್ತು. ಈ ಘಟನೆಯನ್ನು ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ದೀಪ್ ಸಿಧು ಬಿಜೆಪಿ ಮುಖಂಡರೊಂದಿಗೆ ಆತ್ಮೀಯರಾಗಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಳೆದ 14 ದಿನಳಿಂದ ತಲೆಮರೆಸಿಕೊಂಡಿದ್ದ ದೀಪ್ ಸಿಧುನನ್ನು ಇಂದು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Join Whatsapp
Exit mobile version