Home ಟಾಪ್ ಸುದ್ದಿಗಳು ದೇಶದ 576 ಮಾತೃಭಾಷೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರ

ದೇಶದ 576 ಮಾತೃಭಾಷೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದ 576 ಮಾತೃಭಾಷೆಗಳ ಸಮೀಕ್ಷೆ ಹಾಗೂ ವೀಡಿಯೋಗ್ರಫಿಯನ್ನು ಕೇಂದ್ರ ಗೃಹ ಸಚಿವಾಲಯ ಪೂರ್ಣಗೊಳಿಸಿದ್ದು, ಭಾಷೆಯೊಂದಿಗೆ ಅದರ ಉಪಭಾಷೆಗಳ ಸಮೀಕ್ಷೆಯೂ ನಡೆದಿದೆ.


ಪ್ರತಿ ಸ್ಥಳೀಯ ಮಾತೃಭಾಷೆಯ ಅಸ್ಮಿತೆಯನ್ನು ಸಂರಕ್ಷಿಸಲು ಮತ್ತು ವಿಶ್ಲೇಷಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್ಐಸಿ) ವೆಬ್ ದಸ್ತಾವೇಜು (ಆರ್ಕೈವ್) ಸ್ಥಾಪಿಸಲು ಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಈ ಉದ್ದೇಶಕ್ಕಾಗಿ, ಆಂತರಿಕ ಭಾಷಾಶಾಸ್ತ್ರಜ್ಞರಿಂದ ಭಾಷಾ ದತ್ತಾಂಶಗಳ ಜೋಡಣೆ ಮತ್ತು ಸಂಪಾದನಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅದು ಹೇಳಿದೆ.


ದೇಶದ 6ನೇ ಪಂಚವಾರ್ಷಿಕ ಯೋಜನೆಯಿಂದಲೂ ಭಾರತದಲ್ಲಿ ಭಾಷಾ ಸಮೀಕ್ಷೆ (ಎಲ್ಎಸ್ಐ) ನಿಯಮಿತ ಸಂಶೋಧನಾ ಚಟುವಟಿಕೆಯಾಗಿ ನಡೆದುಕೊಂಡು ಬಂದಿದೆ ಎಂದು ಗೃಹ ಸಚಿವಾಲಯ ಹೇಳಿದೆ.

Join Whatsapp
Exit mobile version