Home ಟಾಪ್ ಸುದ್ದಿಗಳು 2011ರ ಕೆಎಎಸ್ ಬ್ಯಾಚ್ ಆಯ್ಕೆ ಪಟ್ಟಿಗೆ ಸರ್ಕಾರದಿಂದ ಮರುಜೀವ ಪ್ರಯತ್ನ; ಹೋರಾಟ ಸಮಿತಿಯಿಂದ ಪ್ರತಿಭಟನೆ

2011ರ ಕೆಎಎಸ್ ಬ್ಯಾಚ್ ಆಯ್ಕೆ ಪಟ್ಟಿಗೆ ಸರ್ಕಾರದಿಂದ ಮರುಜೀವ ಪ್ರಯತ್ನ; ಹೋರಾಟ ಸಮಿತಿಯಿಂದ ಪ್ರತಿಭಟನೆ

ಬೆಂಗಳೂರು: ಭ್ರಷ್ಟಾಚಾರ ಕಾರಣದಿಂದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ 2011ನೇ ಬ್ಯಾಚ್ ನ 362ನೇ ಆಯ್ಕೆ ಪಟ್ಟಿಯನ್ನು ರದ್ದು ಮಾಡಿದ್ದರೂ ಸರ್ಕಾರ , ಆಯ್ಕೆ ಪಟ್ಟಿಗೆ ಮರುಜೀವ ನೀಡಲು ಹೊರಟಿರುವುದನ್ನು ಖಂಡಿಸಿ 2011 ನೇ ಬ್ಯಾಚ್ ನ ಕೆ ಎ ಎಸ್ 362 ಹುದ್ದೆಗಳ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ದಲಿತ ಪದವೀಧರ ಅಸೋಸಿಯೇಷನ್ ಸದಸ್ಯರು ಬೆಂಗಳೂರಿನ ಮೌರ್ಯವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ನ್ಯಾಯಾಲಯದಲ್ಲಿ ಭ್ರಷ್ಟಾಚಾರ ವೆಸಗಿರುವ 362 ಹುದ್ದೆಗಳ ಆಯ್ಕೆ ಪಟ್ಟಿ ಅಸಿಂದುಗೊಳಿಸಿದ್ದರೂ ಸರ್ಕಾರ ಆಯ್ಕೆ ಪಟ್ಟಿಗೆ ಮರು ಜೀವ ನೀಡಲು ಮುಂದಾಗಿದೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ಲದಂತೆ ಆಗಿದೆ ಎಂದು ಹೇಳಿದರು.
362 ಹುದ್ದೆಗಳ ಕೆ.ಪಿ.ಎಸ್. ಸಿ ನಡೆಸಿದ ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆಯಲ್ಲಿ. ಸಿಐಡಿ ವರದಿಗಳ ಅನ್ವಯ ಸರ್ಕಾರವು ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಅನೇಕ ಪ್ರತಿಭಾನ್ವಿತ ನಿರುದ್ಯೋಗ ಪದವೀಧರರು 2011ರಲ್ಲಿ ಕರೆಯಲಾಗಿದ್ದ ಪರೀಕ್ಷೆಯು ಸುಪ್ರೀಂಕೋರ್ಟ್ ನ ಮೂರು ತೀರ್ಪುಗಳು ಹಾಗೂ ರಾಜ್ಯ ಹೈ ಕೋರ್ಟ್ ನ 2 ತೀರ್ಪು ನಲ್ಲಿ ನೀಡಿದ್ದ ಆದೇಶಗಳಲ್ಲಿ ಸಂಪೂರ್ಣ ರದ್ದಾಗಿರುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಒಂದು ವೇಳೆ 362 ಕೆ. ಎ.ಎಸ್ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ್ದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು
ಸರ್ಕಾರ ತಮ್ಮ ಈ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಿ 2011ರ 362 ಕೆ ಎಎಸ್ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಿ ಪಾರದರ್ಶಕವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಾರ್ವಜನಿಕ ಸೇವೆಗೆ ನೇಮಕಾತಿ ಮಾಡಬೇಕು ಎಂದು ದಲಿತ ಪದವೀದರ ಸಂಘದ ಅಧ್ಯಕ್ಷ ಲೋಕೇಶ್ ವಿ. ಆಗ್ರಹಿಸಿದರು

Join Whatsapp
Exit mobile version